ಆಟವಾಡುತ್ತಿದ್ದ ಬಾಲಕಿ ನಾಲೆಗೆ ಬಿದ್ದು ಸಾವು

supritha
ಸುಪ್ರೀತಾ
Published on

ಹಾಸನ: ಶಾಲೆಗೆ ರಜೆ ಇದ್ದ ಕಾರಣ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿ ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದಾಳೆ.
ಅರಕಲಗೂಡು ತಾಲೂಕಿನ ಮಧುರನಹಳ್ಳಿಯ ಸುಪ್ರೀತಾ(5) ಮೃತಪಟ್ಟ ಬಾಲಕಿ. ಶುಕ್ರವಾರ ರಜೆ ಇದ್ದ ಕಾರಣ ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಂಗಿ ಜಲಾಶಯಕ್ಕೆ ಸೇರಿದ ಬಲನಾಲೆದಂಡೆ ನಾಲೆಗೆ ಬಿದ್ದಿದ್ದಾಳೆ.

ಸುಪ್ರಿತಾ ನೀರಿಗೆ ಬೀಳುತ್ತಿದ್ದಂತೆ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಆಗ ಸಮೀಪದಲ್ಲಿದ್ದವರು ಬಂದು ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಿಲ್ಲ. ಸ್ಥಳೀಯರು ಕುಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಮಗುವಿನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ

ಬಲದಂಡೆಯಲ್ಲಿ ಮೃತ ಮಗುವಿಗಾಗಿ ಹುಡುಕಾಟ ಆರಂಭ,
ಸ್ಥಳಕ್ಕೆ ಅರಕಲಗೂಡು ಉಪತಶಿಲ್ದಾರ್ ಹಾಗೂ ಶಿರಸ್ತೆದಾರ್ ಮತ್ತು ಪೊಲೀಸರು ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net