ಟೆರೇಸ್​ ನಿಂದ ಬಿದ್ದು ಬಾಲಕಿ ಮೃತ್ಯು

udp-6-crime 1
Published on

ಉಡುಪಿ: ಮಣಿಪಾಲ ಸರಳೇಬೆಟ್ಟುವಿನಲ್ಲಿರುವ ಖಾಸಗಿ ಅಪಾರ್ಟಮೆಂಟ್ನ ಟೆರೇಸ್​ ನಿಂದ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ.

ಹೆರ್ಗಾ ಗ್ರಾಮದ ಕೃತಿಕಾ ಎಂಬುವವರ ಮಗಳು ಪ್ರಜ್ಞಾ (13) ಮೃತ ಬಾಲಕಿ. ಭಾನುವಾರ ಸಾಯಂಕಾಲ ಟೆರೇಸ್​ನಿಂದ ಬಿದ್ದವಳನ್ನು ಚಿಕಿತ್ಸೆಗಾಗಿ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net