ವಿದ್ಯಾ ದಾನ ಸರ್ವ ದಾನಗಳಲ್ಲಿ ಪ್ರಧಾನ

The gift of knowledge is the greatest of all gifts.
ವಿಜಯಪುರದ ಜೆಸಿಟಿಸಿ ಸಂಸ್ಥೆಯಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಿತು. ಪಂ. ಮಧ್ವಾಚಾರ್ಯ ಮೊಕಾಶಿ, ಬಿ.ಎಚ್. ಕುಲಕರ್ಣಿ ಇದ್ದಾರೆ.
Published on

ವಿಜಯಪುರ: ಕೊಟ್ಟಷ್ಟು ಹೆಚ್ಚಾಗುವ ಹಣವೇ ವಿದ್ಯೆ. ವಿದ್ಯಾ ದಾನ ಸರ್ವ ದಾನಗಳಲ್ಲಿ ಪ್ರಧಾನ ಎಂದು ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ. ಮಧ್ವಾಚಾರ್ಯ ಮೊಕಾಶಿ ಹೇಳಿದರು.

ನಗರದ ಮೀನಾಕ್ಷಿ ಚೌಕ್‌ನಲ್ಲಿರುವ ಜೆಸಿಟಿಸಿ ಸಂಸ್ಥೆಯಲ್ಲಿ ವಿದ್ಯುತಿ-2ಕೆ25 ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ವಾರ್ಷಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿದ್ಯೆ ಜತೆಗೆ ವಿನಯ, ಮೌಲ್ಯಗಳು ವಿದ್ಯಾರ್ಥಿಗಳನ್ನು ಆದರ್ಶವಾಗಿಸುತ್ತವೆ ಎಂದರು.

ವಿಶ್ರಾಂತ ಉಪನ್ಯಾಸಕ ಬಿ.ಎಚ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ಫೌಂಡೇಷನ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸೆಂಟ್ ಜೋಸೆಫ್ ಕಾಲೇಜಿನ ಉಪ ಪ್ರಾಚಾರ್ಯ ಜಯತೀರ್ಥ ಪಂಡರಿ, ಸಂಸ್ಥೆ ಮುಖ್ಯಸ್ಥ ಜಯತೀರ್ಥ ಛಪ್ಪರ. ವೇದೇಶ ಗಿಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net