ಇಳೆಗೆ ತಂಪೆರೆದ ಮಳೆ

3BNK1
Published on

ಬೆಳಗಾವಿ: ಬೆಳಗಾವಿ ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಜಿಟಿ ಜಿಟಿ ಮಳೆ ಸುರಿಯಿತು. ಬೆಳಗ್ಗೆಯಿಂದ ಬಿಸಿಲಿನ ಧಗೆ ಹೆಚ್ಚಾಗಿತ್ತು. ಮಧ್ಯಾಹ್ನ ದಟ್ಟ ಮೋಡ ಕವಿದು 4 ಗಂಟೆಗೆ ಮಳೆ ಸುರಿಯಿತು. ಕಳೆದ ಎರಡ್ಮೂರು ತಿಂಗಳಿಂದ ಬಿಸಿಲಿನ ಧಗೆಗೆ ಬೆಳೆಗಳು ಬಾಡಿ ಹೋಗಿದ್ದವು. ಮಳೆಯ ಸಿಂಚನದಿಂದ ರೈತರ ಮೊಗದಲ್ಲಿ ಸಂತಸ ಮೂಡಿತು. ಸವದತ್ತಿ, ರಾಮದುರ್ಗ, ಮೂಡಲಗಿ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net