

ಶಿಗ್ಗಾಂವಿ: ಉಪಚುನಾವಣೆ ಟಿಕೆಟ್ ಆಕಾಂೆಯಾಗಿದ್ದೆ. ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಅಭ್ಯಥಿರ್ಯಾಗಿ ಸ್ಪಧಿರ್ಸುವ ಕುರಿತು ಅ. 24ರಂದು ಬೆಂಬಲಿಗರ ಸಲಹೆ, ಸೂಚನೆ ಪಡೆದು ನಿರ್ಧರಿಸಲಾಗುವುದು ಎಂದು ಬಿಜೆಪಿ ಮುಖಂಡ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.
ಪಟ್ಟಣದ ನಿವಾಸದಲ್ಲಿ ಸೋಮವಾರ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ೇತ್ರದಲ್ಲಿ ಸಂಚರಿಸಿದ್ದೇನೆ. ತಮ್ಮ ಪುತ್ರ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಸತ್ಯ ಮುಚ್ಚಿಟ್ಟು ಮಗನಿಗೆ ಟಿಕೆಟ್ ಪಡೆದರು. ಇದು ಮನಸಿಗೆ ನೋವುಂಟು ಮಾಡಿದೆ. ಈ ಬಾರಿ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತದೆ ಎಂದು ನಂಬಿದ್ದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೋಶಿ ಅವರೊಂದಿಗೂ ಚಚಿರ್ಸಿದ್ದೆ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಸಿಗದಿರುವುದು ನೋವು ತಂದಿದೆ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ಎಂ.ಎನ್. ವೆಂಕೋಜಿ, ಭರಮಜ್ಜ ನವಲಗುಂದ, ಇತರರು ಉಪಸ್ಥಿತರಿದ್ದರು.