ಗಣೇಶ ಮೂರ್ತಿ ವಿಸರ್ಜನೆ, ಕುಣಿದು ಕುಪ್ಪಳಿಸಿದ ಯುವಕರು

mdl ganesha
ಮುದಗಲ್‌ನಲ್ಲಿ ಸಾರ್ವಜನಿಕ ಗಣೇಶನ ವಿಗ್ರಹವನ್ನು ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
Published on

ಮುದಗಲ್: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಭಾನುವಾರ ಸಂಜೆ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.

ಕಿಲ್ಲಾದ ರಾಮಲಿಂಗೇಶ್ವರ ದೇಸವ್ಥಾನ, ಖಾದ್ರಿಯಾ ಕಾಲನಿ, ಜಾಡರಪೇಟೆ ಹಾಗೂ ಹೂಗಾರ ಓಣಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ವೆಂಕಟರಾಯನಪೇಟೆ ದೇವರಬಾವಿಯಲ್ಲಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಯುವಕರು ಜಯಘೋಷ ಕೂಗುವುದರ ಜತೆಗೆ ನೃತ್ಯ ಮಾಡುತ್ತ ಗಣೇಶ ಮೂರ್ತಿಗೆ ವಿದಾಯ ಕೋರಿದರು. ಮುದಗಲ್ ಠಾಣೆ ಪಿಎಸ್‌ಐ ವೆಂಕಟೇಶ ಮಾಡಗೇರಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ರಂಗೋಲಿ ಸ್ಪರ್ಧೆ: ಸಮೀಪದ ಕನ್ನಾಳ ಗ್ರಾಮದ ಗಜಾನನ ಯುವಕರ ಬಳಗದಿಂದ ಗಣೇಶೋತ್ಸವ ಅಂಗವಾಗಿ ಮಹಿಳೆಯರಿಗೆ ಭಾನುವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 36 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಭಿನ್ನವಾಗಿ ಬಿಡಿಸಿದ ರಂಗೋಲಿಗಳು ಜನರ ಗಮನ ಸೆಳೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net