

ಕೂಡಲಸಂಗಮ : ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ ಹೇಳಿದರು.
ಸ್ಥಳೀಯ ಸಂಗಮೇಶ್ವರ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಡಬಲ್ ಡಚ್ ಸ್ಪೀಡ್ ರೀಲೆ ಮತ್ತು ಡಬಲ್ ಡಚ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು 11 ಬಂಗಾರದ ಪದಕ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯವನ್ನು ಎಲ್ಲ ಶಿಕ್ಷಕರು ಮಾಡಬೇಕು. ಪಾಠದೊಂದಿಗೆ ಆಟಕ್ಕೂ ಮಹತ್ವ ನೀಡಬೇಕು ಎಂದರು.
ದೈಹಿಕ ವಿಷಯ ಪರಿವೀಕ್ಷಕ ಎಸ್.ಟಿ. ಫೈಲ್, ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಪ್ರಭಾರಿ ಪ್ರಾಚಾರ್ಯ ಬಿ.ಆರ್. ಚೌಗಲೆ, ಪ್ರಭಾರಿ ಮುಖ್ಯಶಿಕ್ಷಕರಾದ ಎ.ವೈ. ಕೊಪ್ಪದ, ಜಿ.ಡಿ. ಬಡಿಗೇರ, ದೈಹಿಕ ಶಿಕ್ಷಣ ಶಿಕ್ಷಕ ವಿ.ವಿ. ಮಹಾಲಿಂಗಪುರ, ಗ್ರಾಮಸ್ಥರಾದ ವೀರಣ್ಣ ಶಿವಯೋಗಿ, ಮಲ್ಲಣ್ಣ ಬಾಗೇವಾಡಿ, ಬಿ.ಎಸ್. ನಡುವಿನಮಠ, ಆರ್.ಬಿ. ಸುಂಕದ ಮತ್ತಿತರರಿದ್ದರು.