

ರೇವತಗಾಂವ: ಶಿಣವೆಂದರೆ ಕೇವಲ ಅರ ಜ್ಞಾನದ ಗಳಿಕೆ, ಪಠ್ಯದ ಓದು ಮಾತ್ರವಲ್ಲ. ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮಹತ್ವದ ಕಾಲಟ್ಟವಾಗಿದೆ. ಶಾಲೆಗಳ ಅಭಿವೃದ್ಧಿಯಾದರೆ ಭಾರತದ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ ಎಂದು ರೇವತಗಾಂವ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಆರ್.ಎನ್.ಹತ್ತಳ್ಳಿ ಹೇಳಿದರು.
ಶಾಲೆ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಸ್ವಾಗತ ಕೋರಿ ಅವರು ಮಾತನಾಡಿದರು.
ಶೈಣಿಕ ಅವಶ್ಯಕತೆಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆ ಹೊಂದಾಣಿಕೆ ಮಾಡಿಕೊಂಡು ಮಗುವಿನ ಕಲಿಕಾ ಬಲವರ್ಧನೆ ಆಗಬೇಕಾಗುತ್ತದೆ. ಅಲ್ಲದೆ ಮಕ್ಕಳನ್ನು ಇಂಗ್ಲಿಷ್ ಭಾಷೆಯ ಪರಿಣತರನ್ನಾಗಿಸುವ ನಿಟ್ಟಿನಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಪಾಲಕರ ಪ್ರತಿನಿಧಿ ಅಶೋಕ ಬಿಜ್ಜರಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಿಹಿಯೂಟ ಮಾಡಿಸಲಾಯಿತು. ಅಲ್ಲದೆ ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಶಾಲೆಯ ಶಿಕರಾದ ಎಸ್.ಜೆ.ಬಿಜ್ಜರಗಿ, ಎಸ್.ಡಿ.ಆದಿಗೊಂಡೆ, ಪಿ.ಎ.ವಾಲಿಕಾರ, ಎಂ.ಕೆ.ಬಗಲಿ, ಎ.ಎಚ್.ಬಗಲಿ, ಬಿ.ಎಚ್.ಪೂಜಾರಿ, ಎನ್.ಎಸ್.ೂಡೇಸವಾರ, ಎಂ.ಎಸ್.ಶೇಖ, ಹೀನಾ ಸೈಯದ್ ಇತರರಿದ್ದರು.