

ನವಲಗುಂದ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೂಲ ಜನಪದ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಡಾ. ರಾಮು ಮೂಲಗಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2022-23ನೇ ಸಾಲಿನ ಸಾಂಸ್ಕೃತಿಕ, ಎನ್.ಎಸ್.ಎಸ್., ರೆಡ್ ಕ್ರಾಸ್, ಭಾರತ ಸ್ಕೌಟ್ ಮತ್ತು ಗೈಡ್ಸ್ ಹಾಗೂ ವಿವಿಧ ಚಟುವಟಿಕೆ ಸಮಾರೋಪ ಹಾಗೂ ಬಿ.ಎ. ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಜನಪದ ಸಹಕಾರಿಯಾಗಲಿದೆ ಎಂದರು.
ಪ್ರಾಂಶುಪಾಲ ಎಂ.ಬಿ. ಬಾಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿನಾಯಕ ಮಿರಜಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಾಗರತ್ನಾ ಕುರಡೇಕರ ನಿರೂಪಿಸಿದರು. ಪ್ರೊ. ಸವಿತಾ ಚಿಕ್ಕನವರ ಸ್ವಾಗತಿಸಿದರು. ಪ್ರೊ. ಬಿ.ವಿ. ಏಣಗಿ, ಕಾವ್ಯ ಅಂಗಡಿ, ಪ್ರೊ. ಎಂ.ಎಂ. ಲಸ್ಕರ್, ಡಾ. ಗುಳಗಂಡಿ, ಪ್ರೊ. ಆಶಾ, ಪ್ರೊ. ಬಸವರಾಜ ಸೂಡಿ, ಸಂತೋಷ ಹುಬ್ಬಳ್ಳಿ, ಡಾ. ಸುಗುಣಾ ಡಿ.ವಿ., ಡಾ. ನಾಗರಾಜ ಯಮನೂರ ಇತರರಿದ್ದರು.