ಓದಿನಿಂದಲೇ ಮಾತ್ರ ಭವಿಷ್ಯ ಉಜ್ವಲ

The future is bright only through reading.
Published on

ವಿಜಯಪುರ:ಉಜ್ವಲ ಭವಿಷ್ಯಕ್ಕೆ ಓದು, ಪರಿಶ್ರಮ, ನಿರಂತರ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ಮಹಾವಿದ್ಯಾಲಯದ ಮೂಲ ಸೌಲಭ್ಯ ಸದುಪಯೋಗ ಪಡೆದು ಉತ್ತಮ ಾನ ಸಂಪಾದಿಸುವಂತೆ ಪ್ರಾಚಾಯೆರ್ ಡಾ. ರಾಬಿಯಾ ಮಿರ್ಧೆ ಸಲಹೆ ನೀಡಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದ ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಬಿಎ, ಬಿಎಸ್​ಸಿ ಮತ್ತು ಬಿಸಿಎ ಪ್ರಥಮ ಸೆಮಿಸ್ಟರ್​ ವಿದ್ಯಾರ್ಥಿಗಳ ದೀಾರಂಭ (ಓರಿಯಂಟೇಶನ್​ ಪ್ರೋಗ್ರಾಮ್​) ಕಾರ್ಯಕ್ರಮದಲ್ಲಿ ಶೈಣಿಕ ನೀತಿ ನಿಯಮಗಳು ವಿವಿಧ ವಿಭಾಗಗಳು ಹಾಗೂ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅವರು ಮಾತನಾಡಿದರು.

ನಮ್ಮ ಬಿಎಲ್​ಡಿಇ ಸಂಸ್ಥೆಯು ಉತ್ತರ ಕರ್ನಾಟಕದ ಜನಪ್ರಿಯ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳ ಪಾಲಿನ ಆಶಾಕಿರಣ, ಕಲಿಕಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಹೆಮ್ಮೆಯ ಸಂಸ್ಥೆ. ಅದರಡಿಯಲ್ಲಿ ವಿವಿಧ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಸ್ವಾತಂತ್ರ ಪೂರ್ವದಲ್ಲಿ ಪ್ರಾರಂಭವಾದ ಕಾಲೇಜು ಎಂಬ ಹೆಗ್ಗಳಿಕೆಯೂ ಈ ಮಹಾವಿದ್ಯಾಲಯಕ್ಕೆ ಇದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಗ್ರಂಥಪಾಲಕಿ ಸವಿತಾ ಕನಕರೆಡ್ಡಿ ಗ್ರಂಥಾಲಯದ ಸೌಲಭ್ಯಗಳ ಬಗ್ಗೆ ಹಾಗೂ ಎನ್​ಸಿಸಿ ಮುಖ್ಯಸ್ಥ ಡಾ. ರಾಮಚಂದ್ರ ನಾಯಕ ಅವರು ಎನ್​ಸಿಸಿ ಬಗ್ಗೆ ತಿಳಿಸಿದರು. ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಮುಖ್ಯಸ್ಥ, ಡಾ. ಅನಿಲ ನಾಯಕ, ಸಾಂಸತಿಕ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ, ಎನ್​ಎಸ್​ಎಸ್​ ವಿಭಾಗದ ಮುಖ್ಯಸ್ಥೆ ಡಾ. ತರನ್ನುಮ್​ ಜಬಿನಖಾನ್​ ಮತ್ತು ಡಾ. ಮಿಲನ ರಾಠೋಡ ವಿವಿಧ ವಿಭಾಗಗಳ ಕುರಿತು ಮಾಹಿತಿ ನೀಡಿದರು.

ಶ್ರೀಧರ ಜೋಶಿ, ಡಾ. ಉಷಾದೇವಿ ಹಿರೇಮಠ, ಮಹಾಂತೇಶ ಜೇವೂರ, ಡಾ. ಧರ್ಮಗುರು ಪ್ರಸಾದ ಮತ್ತಿತರರಿದ್ದರು.

ಉಪ ಪ್ರಾಚಾರ್ಯ ಅನಿಲ ನಾಯಕ ಸ್ವಾಗತಿಸಿದರು. ಉಷಾದೇವಿ ಹಿರೇಮಠ, ರೇಣುಕಾದೇವಿ ಕಮತರ ನಿರೂಪಿಸಿದರು. ಪಿ.ಎಸ್​. ಪಾಟೀಲ ವಂದಿಸಿದರು.

ವಿಜಯಪುರದ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಾರಂಭದಲ್ಲಿ ಪ್ರಾಚಾಯೆರ್ ರಾಬಿಯಾ ಮಿರ್ಧೆ ಮಾತನಾಡಿದರು. ಅನಿಲ ನಾಯಕ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net