

ಬೆಳಗಾವಿ: ದೇಶವಾಸಿಗಳಿಗೆ ಸ್ವಾತಂತ್ರ ಸುಲಭವಾಗಿ ದೊರಕಿಲ್ಲ, ಅನೇಕ ಮಹನೀಯರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ ಸಿಕ್ಕಿದೆ. ಪ್ರತಿಯೊಬ್ಬರೂ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಬಡಾವಣೆಯ ರಹವಾಸಿಗಳ ಸಂದ ಅಧ್ಯ ರುದ್ರಣ್ಣ ಚಂದರಗಿ ಅಭಿಪ್ರಾಯಪಟ್ಟರು.
ನಗರದ ಎಚ್.ಡಿ. ಕುಮಾರಸ್ವಾಮಿ ಬಡಾವಣೆಯಲ್ಲಿ ಈಚೆಗೆ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ರಕ್ಷಣೆಯಲ್ಲಿ ಯೋಧರ ಪರಿಶ್ರಮ ಮಹತ್ವದ್ದಾಗಿದೆ. ನಮ್ಮ ಬಡಾವಣೆಯಲ್ಲಿ ಅನೇಕ ಮಾಜಿ ಯೋಧರು ಇರುವುದು ಹೆಮ್ಮೆಯ ಸಂಗತಿ ಎಂದರು.
ಮಾಜಿ ಯೋಧರಾದ ರಾಜ ಶುಕ್ಲಾ, ಕೃಷ್ಣ ಹಂದಿಗುಂದ, ಸಂಜು ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ಬಿ.ಐ.ಪಾಟೀಲ, ಅರವಿಂದ ಜೋಷಿ, ವಿರೂಪಾಕ್ಷ್ಷ ನೇರಲಗಿಮಠ, ಶಿವಪುತ್ರ ಪಡಕಳ, ಶಿವಪುತ್ರ ಗಂಗಾಪುರ, ರಾಜು ಮಂಜರಗಿ, ಮಹಾದೇವ ಹೊಂಗಲ, ರೇಣುಕಾ ಜಾಧವ, ಜಯಶ್ರೀ ತಳವಾರ, ರುಕ್ಮಿಣಿ ಹಂದಿಗುಂದ ಇತರರಿದ್ದರು.