ಅರಿತು ಕಲಿಸಿದಾಗಲೇ ಕಲಿವಿನ ಫಲ

17 vikram 9
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ತರಗತಿಯ ಪಠ್ಯದ ವಿಷಯಗಳನ್ನು ನಿಖರ ನೆಲೆಯಲ್ಲಿ ಅರಿತು ಕಲಿಸಿದಾಗಲೇ ವಿದ್ಯಾರ್ಥಿಗಳಲ್ಲಿ ಕಲಿವಿನ ಫಲದ ಸಂವರ್ಧನೆ ಸಾಧ್ಯ ಎಂದು ಜೀವನ ಶಿಕ್ಷಣ ಮಾಸಪತ್ರಿಕೆ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸುಶೀಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಮ್ಮಿನಬಾವಿ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರದ ಎಲ್ಲ ಶಿಕ್ಷಣ ಆಯೋಗಗಳು ಶಿಕ್ಷಕರು ಅರಿತು ಕಲಿಸೋಣ ಎಂಬ ಸಂಕಲ್ಪ ಮಾಡಬೇಕು ಎಂದು ಸೂಚಿಸುತ್ತವೆ. ಶಿಕ್ಷಕರು ಬೋಧನಾ ವಿಷಯಗಳ ಆಳಕ್ಕಿಳಿದು ಪಡೆದುಕೊಳ್ಳುವ ಜ್ಞಾನದಿಂದ ತರಗತಿಗಳಲ್ಲಿ ಕ್ರಿಯಾಪ್ರೇರಕ ಬೋಧನೆ ಸಾಧ್ಯ. ಅರಿತು ಕಲಿಸೋಣ ಎಂಬ ಮೂಲ ಪರಿಕಲ್ಪನೆಯಲ್ಲೇ ಸಿಆರ್​ಸಿಗಳ ರಚನೆಯಾಗಿದ್ದು, ಹಿಂದಿನ ಡಿಪಿಇಪಿ ಯೋಜನೆಯಿಂದ ಮೊದಲುಗೊಂಡು ಈ ತನಕ ಶಾಲಾ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿರುವ ಯೋಜನೆಗಳ ಹಿಂದಿನ ಮೂಲ ಆಶಯವೂ ಇದೇ ಆಗಿದೆ ಎಂದರು.
ಶ್ರೀಗುರುಶಾಂತಲಿಂಗ ಶಿವಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಸದಸ್ಯ ಬಿ.ಸಿ. ಕೊಳ್ಳಿ ಮಾತನಾಡಿದರು. ಮುಖ್ಯಾಧ್ಯಾಪಕಿ ಮಂಜುಳಾ ದೊಡಮನಿ ಅಧ್ಯಕ್ಷತೆ ವಹಿಸಿದ್ದರು.
ಟಿ. ಎಂ. ದೇಸಾಯಿ, ವಿನಾಯಕ ಹಿರೇಮಠ, ವಿವಿಧ ಶಾಲೆಗಳ ಶಿಕ್ಷಕರು, ಇತರರು ಇದ್ದರು. ಬಸವರಾಜ ಕುರಗುಂದ ಸ್ವಾಗತಿಸಿದರು. ಎಂ. ಆಂಜನೇಯ ನಿರೂಪಿಸಿದರು. ಲೀಲಾ ಬಾಗಲಕೋಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net