ಮಾತು ತಪ್ಪಿದ ನಾಲ್ವರು ಸಿಎಂಗಳು

5KHANAPUR1
Published on

ಖಾನಾಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಡಿ.10ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವ ಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದರು. ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದ ರಾಜ್ಯದ ನಾಲ್ವರು ಸಿಎಂಗಳು ಮಾತು ತಪ್ಪಿದ್ದಾರೆ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಸುವರ್ಣ ಸೌಧದವರೆಗೆ ಟ್ರ್ಯಾಕ್ಟರ್​ ರ್ಯಾಲಿ ಆಯೋಜಿಸಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಅಡಿವೇಶ ಇಟಗಿ, ತಾಲೂಕಾಧ್ಯ ಸಂಗಮೇಶ ವಾಲಿ, ಮುಖಂಡರಾದ ಮಹಾಂತೇಶ ರಾಹುತ, ಶಂಕರಗೌಡ ಪಾಟೀಲ, ಮಲ್ಲೇಶಪ್ಪ ಬೆನಕಟ್ಟಿ, ಮಂಜುನಾಥ ಹಾದಿಮನಿ, ಬಸವರಾಜ ಕುಕಡೊಳ್ಳಿ, ಅಶೋಕ ಯಮಕನಮರಡಿ, ಕಿರಣ ಮೂಲಿಮನಿ, ಆರ್​.ಎನ್​. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net