ಪ್ರತಿಭಾ ಪುರಸ್ಕಾರ ಸಾಧನೆಗೆ ಬುನಾದಿ

5Uk1
Published on

ಉಳ್ಳಾಗಡ್ಡಿ-ಖಾನಾಪುರ: ಯುವಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡಿದರೆ ಅವರಲ್ಲಿ ಜವಾಬ್ದಾರಿ ಹೆಚ್ಚುತ್ತದೆ ಎಂದು ಯುವ ಧುರೀಣ ರವೀಂದ್ರ ಜಿಂಡ್ರಾಳಿ ಹೇಳಿದರು.

ಸಮೀಪದ ಇಂದಿರಾನಗರದಲ್ಲಿ ೩೬ನೇ ವರ್ಷದ ಗಣೇಶ ಉತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಯುವ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ಸಚಿವ ಸತೀಶ ಜಾರಕಿಹೊಳಿ ಅವರು ಇಂದಿರಾನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ೧೦ ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದರು.

ಜೋಮಲಿಂಗ ಪಟೋಳಿ, ದಸ್ತಗೀರ್ ಬಸ್ಸಾಪುರಿ, ಹನುಮಂತ ಗಾಡಿವಡ್ಡರ, ಪಾಂಡು ಗಾಡಿವಡ್ಡರ, ಅಶೋಕ ಸಾಳೆ, ಚನ್ನಪ್ಪ ಗಾಡಿವಡ್ಡರ, ಶೆಟ್ಟಪ್ಪ ಶಿರಹಟ್ಟಿ, ಬಸವರಾಜ ಶಿಂಧೆ, ಗಣಪತಿ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ಸಂತೋಷ ನಾಯಕ, ಬಸವರಾಜ ಕೆಸರೋರಿ, ಎಸ್.ಆರ್.ತಬರಿ, ಗೋಪಾಲ ಚಿಪಣಿ, ಮಂಜುನಾಥ ಪಾತ್ರೋಟ, ಸಂತೋಷ ಹತ್ತರಗಿ, ಅರುಣ ಪಾತ್ರೋಟ, ಶಶಿಕುಮಾರ ಶಿರಹಟ್ಟಿ, ಗುರುರಾಜ ಭೋವಿವಡ್ಡರ, ಶಶಿಕಾಂತ ಗಾಡಿವಡ್ಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net