ಪ್ರತಿಭಾ ಪುರಸ್ಕಾರ ಸಾಧನೆಗೆ ಬುನಾದಿ

ನಗರದ ಸಂತ ಸೇವಲಾಲ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕೆ.ಎಂ.ಶಿವಲಿಂಗೇಗೌಡ, ಎಂ.ಜಿ.ಸಂತೋಷ್ ಕುಮಾರ್ ಮೋಹನ್ ಕುಮಾರ್,ಕೆ.ಎಸ್. ಗಂಗಾಧರಸ್ವಾಮಿ ಇತರರಿದ್ದಾರೆ.
ನಗರದ ಸಂತ ಸೇವಲಾಲ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕೆ.ಎಂ.ಶಿವಲಿಂಗೇಗೌಡ, ಎಂ.ಜಿ.ಸಂತೋಷ್ ಕುಮಾರ್ ಮೋಹನ್ ಕುಮಾರ್,ಕೆ.ಎಸ್. ಗಂಗಾಧರಸ್ವಾಮಿ ಇತರರಿದ್ದಾರೆ.
Published on

ಅರಸೀಕೆರೆ: ಪ್ರತಿಭಾನ್ವಿತರಿಗೆ ಹಮ್ಮಿಕೊಳ್ಳುವ ಪುರಸ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಭದ್ರ ಬುನಾದಿಯಾಗಲಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ವತಿಯಿಂದ ನಗರದ ಸಂತ ಸೇವಾಲಾಲ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ಕಾರ್ಯಾಗಾರ, ಪ್ರತಿಭಾ ಪುಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಪುರಸ್ಕರಿಸಿ ಮಾತನಾಡಿದರು.

ವಿದ್ಯೆ ಸಾಧಕನ ಸೊತ್ತಾಗಿದೆ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಶ್ರಮವಹಿಸಿ ಕಲಿತವರು ಯಶಸ್ಸಿನ ಮೆಟ್ಟಿಲು ಏರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರವನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಹೆಚ್ಚು ಅಂಕ ಪಡೆದವರು ವಿದ್ಯೆಯ ಜತೆಗೆ ವಿನಯವಂತರಾಗಿ ಸಮಾಜ, ಕಲಿತ ಶಾಲೆ,ಪಾಲಕರು ಹಾಗೂ ಗುರುಹಿರಿಯರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ಹಿರಿಯರ ಸಾಧನೆ ಕಿರಿಯರಿಗೆ ಮಾರ್ಗದರ್ಶನ ನೀಡುವಂತಿರಬೇಕು.ಉನ್ನತ ವ್ಯಾಸಂಗ ಮಾಡುವ ಜತೆಗೆ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಇಒ ಮೋಹನ್ ಕುಮಾರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರಸ್ವಾಮಿ ಇನ್ನಿತರರು ಮಾತನಾಡಿದರು.

ಡಯಟ್ ಪ್ರಾಂಶುಪಾಲ ರಂಗನಾಥಸ್ವಾಮಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ಪ, ಕಲ್ಯಾಣ್ ಕುಮಾರ್, ಮೋತಿಲಾಲ್, ಲೋಹಿತ್ ಕುಮಾರ್, ಗಂಜಿಗೆರೆ ಪ್ರಶಾಂತ್, ಶಶಿಕುಮಾರ್, ಮೋಹನ್ ಕುಮಾರ್, ಯೋಗೀಶ್, ಭೂದೇಶ್ವರ ಸ್ವಾಮಿ ಒಡೆಯರ್, ದೇವರಾಜ್ ಇತರರಿದ್ದರು. ಇದೇ ಸಂದರ್ಭದಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಮೂರು ಚಕ್ರದ ಬೈಸಿಕಲ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net