ನಮ್ಮನ್ನು ಮುನ್ನೆಡೆಸುವ ಸೂತ್ರ ಧರ್ಮ

The formula that guides us forward is religion.
ಚಿಕ್ಕಸಂಶಿಯಲ್ಲಿ ಉಡುಪಿಯ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜೀಯಿಂದ ಭಕ್ತರು ಫಲಮಂತ್ರಾಕ್ಷತೆ ಪಡೆದರು.
Published on

ಕಲಾದಗಿ: ದೇವರ ನಾಮಸ್ಮರಣೆ, ಸನಾತನ ಧರ್ಮಾಚರೆಣೆ, ಸತ್ಕಾರ್ಯಗಳಿಂದ ನಮ್ಮನ್ನು ದೇವರು ಮೆಚ್ಚುವ ಮಾರ್ಗ ಅನುಸರಿಸಬೇಕು ಎಂದು ಉಡುಪಿಯ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು ಹೇಳಿದರು.

ಸಮೀಪದ ಚಿಕ್ಕಸಂಶಿಯಲ್ಲಿ ಸೋಮವಾರದಂದು ಗ್ರಾಮದ ಭಕ್ತರಿಂದ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಹಿರಿಯರ ಮಾರ್ಗದಲ್ಲಿ ಮುಂದಿನ ಪೀಳಿಗೆಯೂ ಸಾಗುತ್ತದೆ ಎಂದರು.

ಬದುಕಿನಲ್ಲಿ ಯಶಸ್ವಿಯಾಗಲು, ಕೀರ್ತಿಯನ್ನು ಪಡೆಯಲು ಪ್ರಯತ್ನದ ಜತೆಗೆ ದೇವರ ಅನುಗ್ರಹ ಅಗತ್ಯ. ಭಗವಂತನಿಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಅತನ ಕರುಣೆಗೆ ಪಾತ್ರರಾಗಲು ಸಾಧ್ಯ. ಚಿಕ್ಕಸಂಶಿ ಎಂಬ ಗ್ರಾಮಸ್ಥರು ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಭಗವಂತನ ನಾಮಸ್ಮರಣೆ, ಭಜನೆ, ಸತ್ಸಂಗ ಹಾಗೂ ಸತ್ಕಾರ್ಯಗಳೊಂದಿಗೆ ಜೀವನ ಸಾಗಿಸುತ್ತಿರುವುದು ಸಂತೋಷದ ವಿಷಯ ಎಂದರು.

ಸುಖ ಸಂತೋಷದಿಂದ ಬದುಕಲು ಸಮಾಜದ ಎಲ್ಲರೂ ಅಳವಡಿಸಿಕೊಳ್ಳಬೇಕಾದ ನೀತಿಯಂದರೆ ಸನಾತನ ಧರ್ಮ ಅನುಸರಿಸುವುದು. ಧರ್ಮವೆಂದರೆ ಅದು ಸಮಾಜ ನಮ್ಮನ್ನು ನಿರಂತರವಾಗಿ ಮುನ್ನೆಡೆಸುವ ಬದುಕಿನ ಸೂತ್ರ. ಎಲ್ಲರೂ ನಮ್ಮ ಸುಖಕ್ಕಾಗಿ ಬದುಕದೆ ಇನ್ನೊಬ್ಬರಿಗೂ ಸುಖವಾಗುವಂತೆ ನಡೆದುಕೊಂಡರೆ ಸಮಾಜದಲ್ಲಿ ಎಲ್ಲರೂ ಸುಖ ನೆಮ್ಮದಿ ಶಾಂತಿಯಿಂದ ಬದುಕಲು ಸಾಧ್ಯ ಎಂದರು.

ಭಜನೆಯೊಂದಿಗೆ ಸ್ವಾಗತ

ಇದಕ್ಕೂ ಮೊದಲು ಶ್ರೀಗಳು ಗ್ರಾಮದ ಪುರಾತನ ದೇವಾಲಯವಾದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಆನಂತರ ಗ್ರಾಮದ ಭಜನಾ ಮಂಡಳಿಯವರು ಭಜನೆಯೊಂದಿಗೆ ಶ್ರೀಗಳನ್ನು ಗ್ರಾಮದ ಪ್ರವೇಶದಿಂದ ಮಾರುತೇಶ್ವರ ದೇವಸ್ಥಾನಕ್ಕೆ ಕರೆತಂದರು. ದೇವಸ್ಥಾನದ ಸಭಾಭವನದಲ್ಲಿ ಶ್ರೀಗಳನ್ನು ಸತ್ಕರಿಸಿದರು.

ಗ್ರಾಮದ ಮುಖಂಡರಾದ ಕೆ.ಟಿ. ಪಾಟೀಲ, ಕೃಷ್ಣಪ್ಪ ಕೃಷ್ಣಪ್ಪನವರ, ಅಶೋಕ ಪಾಟೀಲ, ಕೃಷ್ಣಾ ಪತ್ತಾರ, ನಾರಾಯಣ ಹಾದಿಮನಿ, ಬಾಲನಗೌಡ ಪಾಟೀಲ, ಕಾಳಪ್ಪ ಪತ್ತಾರ, ಗೋಪಾಲ ಶೇಗುಣಿಸಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net