ಕಿಡಿಗೇಡಿಗಳಿಂದ ಕಾಡಿಗೆ ಬೆಂಕಿ

12 ldh 5
Published on

ಲಿಂಗದಹಳ್ಳಿ: ಭದ್ರ ವನ್ಯಜೀವಿ ತಣಿಗೆಬೈಲು ವ್ಯಾಪ್ತಿಯ ಹುಲಿತಿಮ್ಮಾಪುರ ವ್ಯಾಪ್ತಿಯ ಸರ್ವೇ ನಂ.29ರಲ್ಲಿರುವ ತರೀಕೆರೆ ಸಾಮಾನ್ಯ ಅರಣ್ಯ ವಿಭಾಗಕ್ಕೆ ಸೇರಿದ ಆಕೇಷಿಯಾ ಪ್ಲಾಂಟೇಷನ್‌ಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಆಕೇಷಿಯಾ ಮರಗಳು ಬೆಂಕಿಗೆ ಅಹುತಿಯಾಗಿವೆ. ಬೆಂಕಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಭದ್ರಾವನ್ಯ ಜೀವಿ ತಣಿಗೆಬೈಲು ವಲಯ ಅರಣ್ಯಾಧಿಕಾರಿ ಸುಧಾಕರ್ ಹಾಗೂ ಉಪ ವಲಯಾರಣ್ಯಾಧಿಕಾರಿ ಚಂದ್ರಪ್ಪನವರ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಡಿನ ಬೆಂಕಿ ನಂದಿಸಿದರು.

ಕಾಡಿಗೆ ಬೆಂಕಿ ಹಚ್ಚುವವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಪರಿಸರ ಉಳಿಸಿ ಕಾಡಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net