ಅಂತ್ಯಕ್ರಿಯೆಗೆ ಅರಣ್ಯ ಇಲಾಖೆ ಕಿರಿಕ್​

1
Published on

ಸ್ಥಳಕ್ಕಾಗಮಿಸಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಶಾಸಕ ಬಿ. ಸುರೇಶ್​ಗೌಡ

ವಿಜಯವಾಣಿ ಸುದ್ದಿಜಾಲ ತುಮಕೂರು
ಅರಣ್ಯ ಇಲಾಖೆ ಜತೆ ತಗಾದೆ ಇರುವ ಸಾಗುವಳಿ ಜಮೀನಿನಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ಮಾಡಿರುವ ಟನೆ ತುಮಕೂರು ತಾಲೂಕು ರಾಮಗೊಂಡನಹಳ್ಳಿ ಭಾನುವಾರ ನಡೆದಿದೆ. ಶನಿವಾರ ರಾತ್ರಿ ಲಕ್ಷ್ಮೀದೇವಮ್ಮ ಅವರ 80 ವರ್ಷದ ತಾಯಿ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದು, ಭಾನುವಾರ ಬೆಳಗ್ಗೆ ಈ ವಿವಾದಿತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲು ಮುಂದಾದಾಗ ಪೊಲೀಸರೊಂದಿಗೆ ಮಧ್ಯಪ್ರವೇಶಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಂತ್ಯ ಸಂಸ್ಕಾರ ನಡೆಸಲು ತಕರಾರು ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಬಿ.ಸುರೇಶ್​ಗೌಡ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಟನೆ ನಡೆಯಿತು.


ಅರಣ್ಯ ಇಲಾಖೆ ತಗಾದೆ ತೆಗೆದು ದಲಿತರ ಅಂತ್ಯಸಂಸ್ಕಾರಕ್ಕೆ ಜಾಗ ನೀಡದೆ ತೊಂದರೆ ನೀಡಿದ ಇಲಾಖೆ ಮತ್ತು ಸರ್ಕಾರದ ವಿರುದ್ಧವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಸ್ಥಳಿಯರೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರೋಧ ಲೆಕ್ಕಿಸದೇ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಯಶಸ್ವಿಯಾದರು. ರಾಮಗೊಂಡನಹಳ್ಳಿಯಲ್ಲಿ ಭಾರತಕ್ಕೆ ಸ್ವಾತಂತ್ರ$್ಯ ಬಂದಾಗಿನಿಂದಲೂ ಲಕ್ಷಿ$್ಮದೇವಮ್ಮ ಎಂಬ ದಲಿತ ಮಹಿಳೆ ರಾಮಗೊಂಡನಹಳ್ಳಿಯಲ್ಲಿ 3.20 ಎಕರೆ ಜಮೀನು ಉಳಿಮೆ ಮಾಡಿಕೊಂಡಿದ್ದು, 1990ರಲ್ಲಿ ಫಾಮ್​ರ್ ನಂಬರ್​ 53ರಲ್ಲಿ ಸರ್ಕಾರಕ್ಕೆ ಬಗರ್​ ಹುಕುಂ ಸಾಗುವಳಿ ಸಕ್ರಮೀಕರಣ ಯೋಜನೆ ಅಡಿಯಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. 2018ರಲ್ಲಿ ಬಗರ್​ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅರ್ಜಿಯನ್ನು ಪರಿಶೀಲಿಸಿ ಎಲ್ಲ ಇಲಾಖೆಗಳಿಂದಲೂ ಎನ್​ಒಸಿ ಪಡೆದು ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿದೆ. ಆದರೆ, ತಹಸೀಲ್ದಾರ್​ ಅರ್ಜಿದಾರರಿಗೆ ಪಹಣಿಯಲ್ಲಿ ಹೆಸರು ನಮೂದು ಮಾಡಿಕೊಡಲು ತಡಮಾಡಿರುವು ಹಿನ್ನೆಲೆಯಲ್ಲಿ ಲಕ್ಷ್ಮೀದೇವಮ್ಮ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.


ಹೈಕೋರ್ಟ್​ ಕೂಡಲೇ ಪಹಣಿ ನಮೂದು ಮಾಡಿ ಕೊಡುವಂತೆ ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ವಿಚಾರಣೆ ಕೈಗೆತ್ತಿಕೊಂಡು ಸಾಧಕ, ಬಾಧಕಗಳ ಪರಿಶೀಲಿಸಿ ರ್ನಿಣಯ ಕೈಗೊಳ್ಳುವಂತೆ ಕೋರ್ಟ್​ ಅರ್ಜಿಯನ್ನು ವಾಪಸ್​ ಕಳುಹಿಸಿದ್ದು, ಪ್ರಕರಣದ ವಿಚಾರಣೆಯ ಬಾಕಿಯಿದೆ. ಸ್ಥಳಿಯ ಮುಖಂಡ ರವೀಶ್​, ಪ್ರಭಾಕರ್​, ರಾಮಚಂದ್ರಯ್ಯ, ಮುನಿಯಪ್ಪ, ನರಸಿಂಹಮೂರ್ತಿ, ಭರತ್​ ಸೇರಿ ನೂರಾರು ಜನರು ಇದ್ದರು.

ಕೋರ್ಟ್​ ತಡೆಯಾಜ್ಞೆ ಇಲ್ಲದೆ ಅಧಿಕಾರಿಗಳ ತಕರಾರು?
ವಿವಾದಿತ ಸ್ಥಳಕ್ಕಾಗಮಿಸಿದ ಶಾಸಕ ಬಿ.ಸುರೇಶ್​ಗೌಡ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇಲ್ಲದ ಪ್ರಕರಣದಲ್ಲಿ ಭೂಮಿಗೆ ಹೋಗಲು ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದರು. ಅರಣ್ಯ ಇಲಾಖೆಯ ಬಳಿ ಇರುವ ದಾಖಲೆಗಳನ್ನು ಕೂಡಲೇ ಸ್ಥಳಕ್ಕೆ ತರಿಸಿ ಪರಿಶೀಲಿಸಿದಾಗ ಯಾವ ನ್ಯಾಯಾಲಯದಲ್ಲಿಯೂ ತಡೆಯಾಜ್ಞೆ ಇರುವುದನ್ನು ತೋರಿಸಲು ಅಧಿಕಾರಿಗಳು ವಿಲರಾದರು. ಹಾಗಾಗಿ, ಬಗರ್​ಹುಕುಂ ಸಮಿತಿ ಹಾಗೂ ಹೈಕೋರ್ಟ್​ ನೀಡಿರುವ ತೀರ್ಪಿನ ಆಧಾರದ ಮೇಲೆ ಲಕ್ಷ್ಮೀದೇವಮ್ಮ ಅವರೇ ಜಮೀನಿನ ಮೂಲ ಮಾಲೀಕರಾಗಿದ್ದು, ಅವರ ಕುಟುಂಬ ಸದಸ್ಯರ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಬಾರದು ಎಂದು ಮನವರಿಕೆ ಮಾಡಿಕೊಟ್ಟರು. ಅಂತ್ಯ ಸಂಸ್ಕಾರ ಮುಗಿಯುವರೆಗೂ ಸ್ಥಳದಲ್ಲಿಯೇ ಇದ್ದರು.

ಬಗರ್​ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಯಾರಿಗೆ ಹಕ್ಕುಪತ್ರ ನೀಡಿದ್ದರೂ ಅಂತಹ ಜಾಗದಲ್ಲಿ ಆಯಾ ಕುಟುಂಬ ಸದಸ್ಯರು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಸರ್ಕಾರದ ಹಂತದಲ್ಲಿ ನಿಯಮಾವಳಿ ರೂಪಿಸಬೇಕು. ರಾಮಗೊಂಡನಹಳ್ಳಿ ಪ್ರಕರಣವನ್ನು ಮಾದರಿಯಾಗಿಟ್ಟುಕೊಂಡು ನಿಯಮ ರೂಪಿಸಬೇಕು.| ಬಿ.ಸುರೇಶ್​ಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net