ಆಹಾರ ಇಲಾಖೆ ಬಾಗಿಲು ಬಂದ್

10 SRS
Published on

ಶಿರಸಿ: ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಿ ಸರ್ಕಾರ ಮೂರು ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ತಿದ್ದುಪಡಿಯ ಕೊನೆಯ ದಿನವಾದ ಮಂಗಳವಾರ ಶಿರಸಿಯ ಆಹಾರ ಇಲಾಖೆ ಕಚೇರಿ ಬಾಗಿಲು ಹಾಕಿರುವ ದೃಶ್ಯ ಕಂಡು ಬಂತು.

ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಕಡಿತ ಹಾಗೂ ತಿದ್ದುಪಡಿ ಮಾಡಲು ಉತ್ತರ ಕನ್ನಡ ಜಿಲ್ಲೆಗೆ ಅ.8ರಿಂದ 10ವರೆಗೆ ಮೂರು ದಿನ ಕಾಲಾವಕಾಶ ನೀಡಿತ್ತು. ಆದರೆ, ಮಂಗಳವಾರ ತಿದ್ದುಪಡಿಗಾಗಿ ತಹಸೀಲ್ದಾರ್ ಕಚೇರಿಯ ಆಹಾರ ವಿಭಾಗದ ಕೊಠಡಿಯಲ್ಲಿ ಯಾವ ಅಧಿಕಾರಿ, ಸಿಬ್ಬಂದಿಯೂ ಇಲ್ಲದೆ ಬಾಗಿಲು ಹಾಕಲಾಗಿತ್ತು. ಇದರಿಂದ ಹತ್ತಾರು ಕಿಮೀ ದೂರದಿಂದ ಬಂದ ಜನರು ಹಿಡಿಶಾಪ ಹಾಕುತ್ತ ವಾಪಸ್ ತೆರಳಿದರು.

ಮಂಗಳವಾರ ಬನವಾಸಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಿಬ್ಬಂದಿ ಅಲ್ಲಿ ತೆರಳಿ, ಇಲ್ಲಿ ಬಾಗಿಲು ಹಾಕಿ ಹೋಗಿದ್ದಾರೆ ಎನ್ನಲಾಗಿದೆ. ಆಹಾರ ಇಲಾಖೆ ಬಾಗಿಲು ಹಾಕಿದ್ದರೂ ಕೆಲವರು ಅಲ್ಲೇ ಕುಳಿತು ಸಿಬ್ಬಂದಿಗಾಗಿ ಕಾದರು.

ಬನವಾಸಿಯಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ ಕಾರ್ಯಕ್ರಮವಿದ್ದ ಕಾರಣ ಸಿಬ್ಬಂದಿ ಅಲ್ಲಿಗೆ ಹೋಗಿದ್ದರು. ಕಳೆದ ಎರಡು ದಿನಗಳಿಂದ ಸಿಬ್ಬಂದಿ ಪಡಿತರ ಚೀಟಿ ತಿದ್ದುಪಡಿಗೆ ಸಹಕಾರ ನೀಡಿದ್ದಾರೆ. ಆದರೆ, ಸರ್ವರ್ ಕೈಕೊಟ್ಟಿದ್ದರಿಂದ ಸಮಸ್ಯೆ ಆಗಿದೆ.>ಶ್ರೀಧರ ಮುಂದಲಮನಿ, ತಹಸೀಲ್ದಾರ್ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net