ಹೂವಿನಹಡಗಲಿ ಮಾರುಕಟ್ಟೆಯಲ್ಲಿ ಜನದಟ್ಟಣೆ

31 HBH 01
ಹೂವಿನಹಡಗಲಿಯಲ್ಲಿ ಜನರು ಗುರುವಾರ ಹೂ ಖರೀದಿಸುತ್ತಿರುವುದು.
Published on

ಹೂವಿನಹಡಗಲಿ: ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಾಲೂಕಿನ ಜನರು ವಿವಿಧ ಬಗೆಯ ಹೂ, ಹಣ್ಣುಗಳನ್ನು ಖರೀದಿ ಮಾಡುತ್ತಿರುವ ದೃಶ್ಯಗಳು ಗುರುವಾರ ಕಂಡು ಬಂದವು. ಪಟ್ಟಣದಲ್ಲಿ ಬಾಳೆಕಂಬ, ಹೂ, ಕುಂಬಳಕಾಯಿ ಹಾಗೂ ಇತರ ಪದಾರ್ಥಗಳನ್ನು ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿಟ್ಟು ಮಾರಾಟ ಮಾಡಿದರು.

ಹಣ್ಣು, ಹೂಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡ ಕಾರಣ ಗ್ರಾಹಕರು ಸ್ವಲ್ಪ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಶಾಸ್ತ್ರೀ ವೃತ್ತದಿಂದ ಮದಲಗಟ್ಟಿ ವೃತ್ತದವರೆಗೂ ಜನದಟ್ಟಣೆ ಹೆಚ್ಚಾಗಿತ್ತು. ಮಹಿಳೆಯರು ವಿವಿಧ ಬಗೆಯ ಮಣ್ಣಿನ ಹಾಗೂ ವಿದ್ಯುತ್ ಅಲಂಕೃತ ಪಣತಿಗಳನ್ನು ಖರೀದಿಸಿದರು.

ಮನೆ ಮುಂಭಾಗದಲ್ಲಿ ವಿವಿಧ ಬಣ್ಣಗಳ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿದ್ದವು. ಈ ಬಾರಿ ಸಿಡಿಮದ್ದುಗಳನ್ನು ಮಾರಾಟ ಮಾಡಲು ತಾಲೂಕು ಕ್ರೀಡಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಜನರು ಖರೀದಿಸುತ್ತಿರುವುದು ಸಾಮ್ನಾೃವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಮುಂಜಾಗ್ರತೆ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net