

ರೋಣ: ಪಟ್ಟಣದಲ್ಲಿ ವ್ಯಾಪಕವಾಗಿರುವ ಹಂದಿಗಳ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದು ದೊಡ್ಡಸಿದ್ದಪ್ಪ ಭಜಂತ್ರಿ, ಕೃಷ್ಣ ಹುಲಗಪ್ಪ ಭಜಂತ್ರಿ, ಮಲ್ಲಿಕಾರ್ಜುನ ನಾಗರಾಜ ಭಜಂತ್ರಿ ಸೇರಿ ಐವರನ್ನು ಬಂಧಿಸಲಾಗಿದೆ. ಬಂಧಿತರಿಂದ 1.25 ಲಕ್ಷ ರೂ. ನಗದು ಮತ್ತು ಒಂದು ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಭುಗೌಡ ಕಿರೇದಳ್ಳಿ, ರೋಣ ಸಿಪಿಐ ಎಸ್.ಎಸ್. ಬೀಳಗಿ ಮಾರ್ಗದರ್ಶನದಲ್ಲಿ ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ವಿ.ಎಸ್. ಚವಡಿ ನೇತೃತ್ವದಲ್ಲಿ ಸಿಬ್ಬಂದಿ ಹನುಮಪ್ಪ ಶಂಕ್ರಿ, ಎಂ.ಬಿ. ವಡ್ಡಟ್ಟಿ, ಮಂಜುನಾಥ ಕುರಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ, ಮುತ್ತಪ್ಪ ಬಾವಿ, ಡಿ.ಎಂ. ಚಿತ್ರಗಾರ, ಹನುಮಂತ ಹುಲ್ಲೂರ, ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಅವರ ತಂಡ ರಚಿಸಲಾಗಿತ್ತು.