ಮಣ್ಣನ್ನು ‘ಮರಳು’ ಮಾಡುವ ದಂಧೆಗೆ ಮೊದಲ ಬಲಿ, ಮಣ್ಣಿನ ಗುಡ್ಡೆ ಕುಸಿದು ಸಾವು

sand
Published on

ಗಜೇಂದ್ರಗಡ: ಹಳ್ಳ ಮತ್ತು ಕೆರೆಗಳಲ್ಲಿನ ಮಣ್ಣು ತೆಗೆದು ಮರಳು ಮಾಡುವ ದಂಧೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ತಾಲೂಕಿನ ಹಿರೇಅಳಗುಂಡಿ ಗ್ರಾಮದ ಈರಪ್ಪ ಯಲ್ಲಪ್ಪ ಕೋನಣ್ಣವರ (45) ಮೃತ ದುರ್ದೈವಿ.

 ಏನಿದು ಘಟನೆ: ತಾಲೂಕಿನ ಹಿರೇಅಳಗುಂಡಿ ಗ್ರಾಮದ ಹಳ್ಳದಲ್ಲಿ ಮಳೆಗಾಲದಲ್ಲಿ ಮರಳು ಸಂಗ್ರಹವಾಗುತ್ತದೆ. ಇಲ್ಲಿನ ಮರಳಿಗೆ ಎಲ್ಲಿಲ್ಲದ ಬೇಡಿಕೆ. ಇಲ್ಲಿನ ಮರಳು ಖಾಲಿ ಆದ ಮೇಲೆ ಟ್ಯ್ರಾಕ್ಟರ್ ಮಾಲೀಕರು ಹಳ್ಳದಲ್ಲಿರುವ ಮಣ್ಣನ್ನು ತೆಗೆದು ಫಿಲ್ಟರ್ ಮಾಡಿ ಮರಳನ್ನಾಗಿ ಪರಿವರ್ತನೆ ಮಾಡಿ ಮಾರಾಟ ಮಾಡುತ್ತಾರೆ. ಈ ದಂಧೆಯಿಂದ ಇಡೀ ಹಳ್ಳವೇ ಗುಂಡಿಯಂತೆ ನಿರ್ವಣವಾಗಿದೆ. ಈರಪ್ಪ ಕೋನಣ್ಣವರ ಅವರು ಟ್ರ್ಯಾಕ್ಟರ್​ನಲ್ಲಿ ಮಣ್ಣು ತುಂಬುವಾಗ ಮಣ್ಣಿನ ಗುಡ್ಡೆ ಕುಸಿದು ಅದರಡಿ ಸಿಲುಕಿದ್ದಾರೆ. ಅಲ್ಲಿದ್ದ ಸ್ಥಳೀಯರ ನೆರವು ಪಡೆದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್ ತೆಗೆದುಕೊಂಡು ಮಣ್ಣು ತುಂಬಲು ಹೋದಾಗ ಈ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ಘಟನಾ ಸ್ಥಳಕ್ಕೆ ತೆರಳಿ ವರದಿ ನೀಡಲಾಗುವುದು. | ಸೋಮನಗೌಡ ಗೌಡ್ರ, ಪಿಎಸ್​ಐ ಗಜೇಂದ್ರಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net