

ಮಸ್ಕಿ: ಸಮುದಾಯ ಸಂಘಟನೆಗಾಗಿ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ.12ರಂದು ತಾಲೂಕು ಬ್ರಾಹ್ಮಣರ ಪ್ರಥಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಹನುಮಂತರಾವ್ ಕುಲಕರ್ಣಿ ಬಳಗಾನೂರು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬ್ರಾಹ್ಮಣರು ಸರ್ಕಾರಿ ನೌಕರಿ ಕೊಡಿ ಎಂದು ಮೀಸಲಾತಿ ಕೇಳುವುದಿಲ್ಲ. ಬದಲಿಗೆ ಜಾತಿ ಪಟ್ಟಿಯಲ್ಲಿ ಹೆಸರು ಸೇರಿಸಿ ಎಂದು ಒತ್ತಾಯಿಸುತ್ತಿದ್ದೇವೆ ಎಂದರು.
ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಲಿದ್ದಾರೆ. ನಿವೃತ್ತ ಡಿಸಿ ಮುದ್ದುಮೋಹನ ಬೆಂಗಳೂರು, ಬ್ರಾಹ್ಮಣ ಸಮಾಜದ ರಾಜ್ಯ ಉಪಾಧ್ಯಕ್ಷ ಡಾ.ಆನಂದ ಫಡ್ನವೀಸ್, ಜಿಲ್ಲಾಧ್ಯಕ್ಷ ಮುರಳೀಧರರಾವ್ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ರಾಮರಾವ್ ಗಣೇಕಲ್, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತರಾವ್ ಕುಲಕರ್ಣಿ ಭಾಗವಹಿಸಲಿದ್ದಾರೆ. ಸಾಹಿತಿ ಪವನಕುಮಾರ ಗುಂಡೂರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಮಾವೇಶದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ, ಬ್ರಾಹ್ಮಣ ಸಮಾಜದ ಯುವ ಘಟಕ ಉದ್ಘಾಟನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಹನುಮೇಶ ಆಚಾರ್ಯ ಬುದ್ದಿನ್ನಿ, ರಮೇಶ ಕುಲರ್ಣಿ, ವಿನಯ ಕುಲಕರ್ಣಿ, ಪ್ರಕಾಶ ಜೋಷಿ, ಅರವಿಂದ ಬಪ್ಪೂರು ಇತರರಿದ್ದರು.