ಹೋಟೆಲ್​ನಲ್ಲಿ ಬೆಂಕಿ ಆಕಸ್ಮಿಕ

udp-fire
Published on

ಉಡುಪಿ: ನಗರದ ಕರಾವಳಿ ಜಂಕ್ಷನ್​ ಬಳಿ ಬೆಂಕಿ ಅವಘಡದಿಂದ ಹೋಟೆಲ್​ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಂಗಳವಾರ ಸಾಯಂಕಾಲ ಸಂಭವಿಸಿದೆ.

ಕರಾವಳಿ ಜಂಕ್ಷನ್​ ಬಳಿ ಇರುವ ಬಿರಿಯಾನಿ ಹಟ್​ ಎಂಬ ಹೋಟೆಲ್​ ನಲ್ಲಿ ಸಾಯಂಕಾಲ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಹೋಟೆಲ್​ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಕಳೆದ ಕೆಲ ದಿನಗಳಿಂದ ಹೋಟೆಲ್​ ಮಾಲಿಕರು ವ್ಯಾಪಾರ ಸ್ಥಗಿತಗೊಳಿಸಿದ್ದು, ಶಾರ್ಟ್​ ಸಕ್ಯೂರ್ಟ್​ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net