ಯುವ ಕಬಡ್ಡಿ ಸರಣಿಯ ಫೈನಲ್ ಪಂದ್ಯ ಬುಧವಾರ

kabaddi
Published on

ಪ್ರೊ.ಕಬಡ್ಡಿ ಮಾದರಿಯಲ್ಲಿ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯುವ ಕಬಡ್ಡಿ ಸರಣಿಯ ಫೈನಲ್ ಪಂದ್ಯ ಜು.19ರಂದು ನಡೆಯಲಿದೆ ಎಂದು ಸರಣಿಯ ಸಿಇಒ ವಿಕಾಸ್ ಗೌತಮ್ ತಿಳಿಸಿದರು.


ಜೂ.17ರಿಂದ ನಡೆಯುತ್ತಿರುವ ಆವೃತ್ತಿ ಅಂತಿಮ ಘಟ್ಟ ತಲುಪಿದ್ದು, ಜು.19ರಂದು ಸಂಜೆ 7.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಂದ್ಯ ವೀಕ್ಷಿಸಿ ಬಹುಮಾನ ವಿತರಿಸಲಿದ್ದಾರೆ. ತಮಿಳುನಾಡಿನ ಪಳನಿ ಟಸ್ಕರ್ಸ್ ಈಗಾಗಲೇ ಫೈನಲ್ ತಲುಪಿದ್ದು, 2ನೇ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪಂದ್ಯಾವಳಿಯಲ್ಲಿ ರಾಜಸ್ಥಾನದ ಅರವಾಳಿ ಆರೋವ್ಸ್, ಪೆರಿಯಾರ್ ಪ್ಯಾಂಥರ್ಸ್, ಪಾಂಡಿಚೇರಿಯ ಚೋಳ ವೀರನ್ಸ್, ಅಸ್ಸಾಂನ, ಮಣಿಪುರ ಮತ್ತು ತ್ರಿಪುರ ರಾಜ್ಯಗಳ ಕಾಜಿರಂಗ ರೈನೋಸ್, ತಮಿಳುನಾಡಿನ ಪಳನಿ ಟಸ್ಕರ್ಸ್, ಜಾರ್ಖಂಡದ ಸಿಂಧ್ ಸೋನಿಕ್ಸ್, ಕರ್ನಾಟಕದ ಹಂಪಿ ಹೀರೋಸ್, ಛತ್ತೀಸ್‌ಘಡದ ಚಂಬಲ್ ಚಾಲೆಂಜರ್ಸ್, ತಮಿಳುನಾಡಿನ ನೀಲಗಿರಿ ನೈಟ್ಸ್ ತಂಡಗಳು ಭಾಗವಹಿಸಿದ್ದು, ಒಟ್ಟು 120 ಪಂದ್ಯಗಳು ನಡೆದಿವೆ ಎಂದರು.

ಚಾಂಪಿಯನ್ ತಂಡಕ್ಕೆ 20 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. 2 ಸ್ಥಾನಕ್ಕೆ 10 ಲಕ್ಷ ರೂ., 3ನೇ ಸ್ಥಾನಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ನಂತರ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 2 ಲಕ್ಷ ರೂ., 1 ಲಕ್ಷ ರೂ. ಹಾಗೂ 50 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಸಂಗ್ರಾಮ್, ಅಂಕಿತ್, ಕೃತಜ್ಞ್ಯ ಮಿಶ್ರಾ, ಅಂಕಿತ್, ಸತ್ಯನಾರಾಯಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net