ರಾಜ್ಯದಲ್ಲಿ ಇನ್ನೂ ಚಿತ್ರರಂಗ, ಚಿತ್ರಮಂದಿರಗಳು ಜೀವಂತ

Dasara Film Festival
ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರೋತ್ಸವವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಶರಣ್, ಕಾರುಣ್ಯಾ ರಾಮ್, ಎಸ್.ಎಚ್.ಸುಂದರೇಶ್, ಆರ್.ಪ್ರಸನ್ನಕುಮಾರ್, ಎಚ್.ಪಾಲಾಕ್ಷಿ ರೇಖಾ ರಂಗನಾಥ್, ನಾಗರಾಜ ಕಂಕಾರಿ, ಇ.ವಿಶ್ವಾಸ್, ಕೆ.ಮಾಯಣ್ಣಗೌಡ ಇದ್ದರು.
Published on

ಶಿವಮೊಗ್ಗ: ಸಮಸ್ಯೆ-ಸವಾಲುಗಳ ನಡುವೆಯೂ ಹಲವು ತಜ್ಞರ, ಪರಿಣಿತರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ ರಾಜ್ಯದಲ್ಲಿ ಇನ್ನೂ ಚಿತ್ರರಂಗ, ಚಿತ್ರಮಂದಿರಗಳು ಜೀವಂತವಾಗಿವೆ. ಇಲ್ಲದಿದ್ದಲ್ಲಿ ಪಳಿಯುಳಿಕೆಗಳಾಗಿ ನೋಡಬೇಕಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರಸಮಾಜದ ಆಶ್ರಯದಲ್ಲಿ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಕಾರಣಗಳಿಂದ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಚಿತ್ರರಂಗಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ರಾಜ್ಯದಲ್ಲಿಯೇ ನೋಡುವಂತಾಗಿದೆ. ಅದಕ್ಕೂ ಮುನ್ನ ರಾಜ್ಯದ ಚಲನಚಿತ್ರದ ನಿರ್ಮಾಪಕರು ತಮ್ಮ ಅಗತ್ಯಗಳಿಗೆ ಮದ್ರಾಸ್‌ಗೆ ಹೋಗಿಬರಬೇಕಾಗುತ್ತಿತ್ತು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಸೂಡಾ ಅಧ್ಯಕ್ಷ ಎಸ್.ಎಚ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ನಟಿ ಕಾರಣ್ಯರಾಮ್, ಮಾಜಿ ಕಾರ್ಪೊರೇಟರ್‌ಗಳಾದ ರೇಖಾ ರಂಗನಾಥ್, ನಾಗರಾಜ ಕಂಕಾರಿ, ಇ.ವಿಶ್ವಾಸ್, ಪ್ರಮುಖರಾದ ಬಿಂಬಶ್ರೀ, ಎಚ್.ಪಾಲಾಕ್ಷಿ, ಕೃಪಾಕರ, ಅಚ್ಯುತ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ರಸಗ್ರಹಣ ಶಿಬಿರ ಏರ್ಪಡಿಸಲಾಗಿತ್ತು.

ಹಲವು ಸಮಸ್ಯೆ-ಸವಾಲುಗಳಿಂದ ಬೆಳ್ಳಿ ತೆರೆ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಕಲೆಯನ್ನು ಪ್ರೋತ್ಸಾಹಿಸುವ, ಕಲಾವಿದರನ್ನು ಪೋಷಿಸುವ ಮನಸ್ಸುಗಳ ತುರ್ತು ಅಗತ್ಯವಿದೆ. -ಶರಣ್, ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net