

ನಂದಗುಡಿ : ಸರ್ಕಾರ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ರೈತರನ್ನು ವಂಚಿಸಿ ಭೂ ಸ್ವಾಧಿನಕ್ಕೆ ಮುಂದಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಯಾವುದೇ ಆಮಿಷಕ್ಕೂ ರೈತರು ಬಲಿಯಾಗುವುದಿಲ್ಲ ಎಂದು ನಂದಗುಡಿ ಭೂ&ಸ್ವಾಧಿನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಭೂ&ಸ್ವಾಧಿನ ವಿರೋಧಿ ಹೋರಾಟ ಸಮಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಸ್ಥಳಿಯ ಜನಪ್ರತಿನಿಧಿಗಳ ಭರವಸೆಯ ಮಾತು ನಂಬಿ ರೈತರು ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಅಧಿಕೃತವಾಗಿ ಭೂ&ಸ್ವಾಧಿನ ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಯುತ್ತದೆ ಎಂದರು.
ಹಿರಿಯ ರೈತ ಮುಖಂಡ ಐ.ಸಿ.ಮುನಿಶಾಮಗೌಡ ಮಾತನಾಡಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ಅಭಿಪ್ರಾಯ ಪಡೆದು, ಸೂಕ್ತ ದಾಖಲೆ ಸಂಗ್ರಹಿಸಿ, ಕಾನೂನು ಹೋರಾಟ ನಡೆಸಲಾಗುವುದು. ಚನ್ನರಾಯಪಟ್ಟಣ, ಬಿಡದಿ ಭಾಗದ ರೈತ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ರೈತ ಸಂ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಹಕ್ಕಲೇಗೌಡ ಮಾತನಾಡಿ, ರೈತರು ಸ್ಥಳಿಯ ಶಾಸಕರ ಭರವಸೆಯಲ್ಲೇ ಮುಳುಗಿದರೆ, ರೈತರು ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ರೈತರು ಸಂಟಿತರಾಗಿ ಹೋರಾಟ ಮುಂದುವರೆಸಿ ಭೂಮಿ ಉಳಿಸಿಕೊಳ್ಳಬೇಕು ಎಂದರು.
ಭೂ ಹೋರಾಟ ಸಮಿತಿ ಸದಸ್ಯ ಎಂ.ಬಿ.ವೆಂಕಟೇಶ್ ಮಾತನಾಡಿ, ಚನ್ನರಾಯಪಟ್ಟಣ ರೈತರು ಸತತ 3 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದ್ದರಿಂದ ಎಲ್ಲರೂ ಹೋರಾಟಕ್ಕೆ ಅಣಿಯಾಗೋಣ ಎಂದು ಹೇಳಿದರು.