ಪದ್ಮಣ್ಣವರ ಕೊಲೆ ಪ್ರಕರಣದ ಐದನೇ ಆರೋಪಿ ಬಂಧನ

IMG-20241205-WA0002.jpg
Published on

ಬೆಳಗಾವಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಎಂಎಸ್ ವೈದ್ಯನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ನಗರದ ಬಿಎಎಂಎಸ್ ವೈದ್ಯ ಪ್ರಶಾಂತ ಶಿವಾನಂದ (38) ಬಂಧಿತ. ಮೃತ ಸಂತೋಷ ಪದ್ಮಣ್ಣವರಿಗೆ ಮಾತ್ರೆ, ಇಂಜೆಕ್ಷನ್ ಯಾವ ರೀತಿ ನೀಡಬೇಕು ಎಂಬುವುದನ್ನು ಮಾರ್ಗದರ್ಶನ ನೀಡುವಲ್ಲಿ ಅವರ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ 5ನೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net