ಸಂಭ್ರಮದ ನೀಲಗುಂದೇಶ್ವರ ರಥೋತ್ಸವ

12BNK1
Published on

ಬೆನಕಟ್ಟಿ: ಗ್ರಾಮದಲ್ಲಿ ದವನದ ಹುಣ್ಣಿಮೆ ನಿಮಿತ್ತವಾಗಿ ಶ್ರೀ ನೀಲಗುಂದೇಶ್ವರ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಶ್ರೀ ನೀಲಗುಂದೇಶ್ವರ ದೇವರ ಮೂರ್ತಿಗೆ ಅಭಿಷೇಕ ಸೇರಿ ವಿಶೇಷ ಪೂಜೆ ಸಲ್ಲಿಸಿ ಅಲಂಕಾರ ನೆರವೇರಿಸಲಾಯಿತು.

ಸಂಜೆ 5 ಗಂಟೆಗೆ ಶ್ರೀ ನೀಲಗುಂದೇಶ್ವರ ನಂದಿಕೋಲ ಪೂಜೆ ಸಲ್ಲಿಸಲಾಯಿತು. ಲ್ಲಕ್ಕಿ ಉತ್ಸವ ಜರುಗಿತು. ಬಳಿಕ ರಥೋತ್ಸವ ಸ್ಥಳೀಯ ಅರಳಿಕಟ್ಟಿ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಸಾಗಿ ಪುನಃ ಮೂಲ ಸ್ಥಳಕ್ಕೆ ಆಗಮಿಸಿತು. ಭಕ್ತರು ಉತ್ತತಿ, ಬಾಳೆಹಣ್ಣು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net