ಶ್ರೀ ಮೂಗಬಸವೇಶ್ವರ ದೇವರ ಜಾತ್ರಾ ಮಹೋತ್ಸವ

29 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಹೆಬ್ಬಳ್ಳಿ ಗ್ರಾಮದ ಆರಾಧ್ಯದೈವ ಶ್ರೀ ಮೂಗಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 30ರಂದು ರಥೋತ್ಸವ ಜರುಗಲಿದೆ. ಅಂದೆ ಸಂಜೆ 5ಕ್ಕೆ ನಡೆಯುವ ರಥೋತ್ಸವಕ್ಕೆ ಬ್ರಹ್ಮಚೈತನ್ಯಾಶ್ರಮದ ಶ್ರೀ ದತ್ತಾವಧೂತ ಮಹಾರಾಜರು ಚಾಲನೆ ನೀಡುವರು. 31ರಂದು ಕಡುಬಿನ ಕಾಳಗದ ನಿಮಿತ್ತ ಬೆಳಗ್ಗೆ 9.30ಕ್ಕೆ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಲಿದೆ. ಸಂಜೆ 6ಕ್ಕೆ ದೇವಸ್ಥಾನಕ್ಕೆ ಆಗಮಿಸಿ ಕೊನೆಗೊಳ್ಳುವುದು. ಏ. 3ರಂದು ರಾಜ್ಯ ಮಟ್ಟದ ಭಾರಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net