ಕಿರುರಂಗಮಂದಿರದಲ್ಲಿ ಆಯಾಮೋತ್ಸವಕ್ಕೆ ಚಾಲನೆ

26
Published on

ಮೈಸೂರು: ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ನೃತ್ಯ, ನಾಟಕಗಳ ‘ಆಯಾಮೋತ್ಸವ-2024’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ನಗರದ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ಉತ್ಸವಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿ, ಶುಭ ಕೋರಿದರು. ನೈಪುಣ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಆರ್.ರಘು, ರಂಗಕಲಾವಿದ ರಾಜಶೇಖರ ಕದಂಬ, ನೂಪುರ ಸಾಂಸ್ಕೃತಿಕ ಟ್ರಸ್ಟ್‌ನ ಪ್ರೊ.ಕೆ.ರಾಮಮೂರ್ತಿ, ಅಕಾಡೆಮಿ ನಿರ್ದೇಶಕಿ ಡಾ.ಶಾಂಭವಿ ಸ್ವಾಮಿ, ಆಯಾಮ ಅಕಾಡೆಮಿ ಅಧ್ಯಕ್ಷ ಎಸ್.ವೆಂಕಟರಮಣ (ಎಸ್‌ವಿಆರ್) ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಕಾಳಚನ್ನೇಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಸವಿತಾ, ಜೆಡಿಎಸ್ ಮುಖಂಡ ಸುರೇಶ್ ಇತರರು ಇದ್ದರು.

ಗೋವಿನ ಹಾಡು ನೃತ್ಯ ರೂಪಕ ‘ಸತ್ಯವೇ ಮಾರ್ಗ ತ್ಯಾಗವೇ ಧರ್ಮ’ ಆಯಾಮ ವಿದ್ಯಾರ್ಥಿಗಳಿಂದ ಪ್ರಸ್ತುತ ಪಡಿಸಲಾಯಿತು. ಶಾಂಭವಿ ಸ್ವಾಮಿ ಅವರು ವಿನ್ಯಾಸ, ನಿರ್ದೇಶನ, ಜೀವನ್ ಹೆಗ್ಗೋಡ ಬೆಳಕಿನ ವಿನ್ಯಾಸ, ಮಂಜು ಕಾಚಕ್ಕಿ ಪರಿಕರ ಇತ್ತು.

ಡಿ.22ರಂದು ಸಂಜೆ 6.30ಕ್ಕೆ ಸಾಂಪ್ರದಾಯಿಕ ಮಾರ್ಗ ‘ಭರತನಾಟ್ಯ’, ಡಿ.23ರಂದು ಆಯಾಮ ವಿದ್ಯಾರ್ಥಿಗಳಿಂದ ವಚನಗಳನ್ನಾಧರಿಸಿದ ನೃತ್ಯ ರೂಪಕ ‘ಅನುಭವ ಮಂಟಪ’ ಪ್ರಸ್ತುತಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net