ಉತ್ತಮ ಪ್ರತಿಭೆಗಳಿಗೆ ಉತ್ಸವವೇ ವೇದಿಕೆ

HONNAVAR USTAV
Published on

ಹೊನ್ನಾವರ: ಉತ್ಸವದಿಂದ ಉತ್ತಮ ಪ್ರತಿಭೆಗಳಿಗೆ ವೇದಿಕೆ ದೊರೆಯುತ್ತದೆ ಮತ್ತು ಜನರಿಗೆ ಮನರಂಜನೆ ಸಿಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪ್ರಭಾತನಗರದ ಸೇಂಟ್ ಅಂಥೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಹೊನ್ನಾವರ ಉತ್ಸವ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ಹೊನ್ನಾವರ ಉತ್ಸವ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಹೊನ್ನಾವರ ತಾಲೂಕಿನಲ್ಲಿರುವ ಪ್ರಸಿದ್ಧ ಕಲಾವಿದರು ಈ ನೆಲಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಇಲ್ಲಿಯ ಜನರು ಕಲೆಯನ್ನು ಪ್ರೋತ್ಸಾಹಿಸುತ್ತಾರೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಮಾತನಾಡಿ, ಪ್ರತಿಭಾವಂತರು ಇರುವ ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹೊನ್ನಾವರದಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ನಾಗರಾಜ ಭಟ್ಟ, ಸದಸ್ಯ ಶಿವರಾಜ ಮೇಸ್ತ, ಬೆಳಕೊಂಡ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ, ವಂದೂರು ಗೋವಿಂದ ಗೌಡ, ಹಳದೀಪುರ ಅರುಣ ಹಬ್ಬು ಮಾತನಾಡಿದರು. ಸಿಂಚನ ಟ್ರಸ್ಟ್ ಅಧ್ಯಕ್ಷ ಕೃಷ್ಣಾನಂದ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಉದ್ಯಮಿ ರವಿ ಶೆಟ್ಟಿ ಕವಲಕ್ಕಿ, ಮಹೇಶ ಮೇಸ್ತ, ಸಚಿನ ನಾಯ್ಕ, ರಾಘವೇಂದ್ರ ನಾಯ್ಕ, ವಿನಾಯಕ ಶೆಟ್ಟಿ, ವಿನಾಯಕ ಆಚಾರಿ, ಶ್ರೀರಾಮ ಜಾದೂಗಾರ, ಡಾ. ರಾಜು ಮಾಳಗಿಮನಿ, ಸಂದೀಪ ಪೂಜಾರಿ, ಇತರರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳಿಯ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಲಿಟಲ್ ಕರಾವಳಿ ಫ್ಯಾಷನ್ ಶೋ ಮತ್ತು ಮಿಸ್ ಕರಾವಳಿ ಸ್ಪರ್ಧೆ ನಡೆಯಿತು. ವಿಶೇಷ ಆಹ್ವಾನಿತರಾಗಿ ಬಿಗ್ ಬಾಸ್ ಸ್ಪರ್ಧಿಗಳಾದ ಹಂಸ, ಚೈತ್ರಾ ಕುಂದಾಪುರ, ಸಿನೆಮಾ ನಟಿ ಬೃಂದಾ ಆಚಾರ್ಯ, ಧಾರಾವಾಹಿ ನಟಿಯರಾದ ಕಾವ್ಯಾ ಗೌಡ, ಮಾಡೆಲ್ ಹರ್ಷಿತಾ ರಾಥೋಡ ಫ್ಯಾಷನ್ ಶೋ ಸ್ಪರ್ಧೆಯನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net