

ವಿಜಯಪುರ : ಮೂತ್ರಪಿಂಡ ದಾನ ಮಾಡುವ ಮೂಲಕ ತಂದೆ ಅನಾರೋಗ್ಯ ಪೀಡಿತ ಪುತ್ರನಿಗೆ ಮರುಜನ್ಮ ನೀಡಿದ್ದಾರೆ.
ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ ಪಿ. ಸಾದಿಕ್ ಪಾಷಾ (45) ಅವರು, ಎರಡೂ ಮೂತ್ರ ಕೋಶಗಳು ವಿಲವಾಗಿರುವ 20 ವರ್ಷದ ಪುತ್ರ ಯಾಸಿನ್ ಪಾಷಾ ಅವರಿಗಾಗಿ ಒಂದುಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಬೆಂಗಳೂರಿನ ಯಲಹಂಕ& ಬಾಗಲೂರು ಕ್ರಾಸ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಚೇತರಿಕೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಾದಿಕ್ ಪಾಷಾ ಚಿಕಿತ್ಸೆಗೆ 1,30,000 ರೂ. ನೀಡಲಾಗಿದೆ. ಎ.ವಿ. ವೀರಭದ್ರಪ್ಪ ಟ್ರಸ್ಟ್ನಿಂದ ಕಾರ್ಯದರ್ಶಿ ತೇಜಸ್ ಮಂಜುನಾಥ್ ಮೂತ್ರಪಿಂಡ ಕಸಿ ಚಿಕಿತ್ಸೆಗಾಗಿ ನೆರವು ನೀಡಿದ್ದಾರೆ. ಚಿಕಿತ್ಸೆಗೆ 18 ಲಕ್ಷ ರೂ. ವೆಚ್ಚವಾಗುತ್ತಿದ್ದು, ಹೆಚ್ಚಿನ ಸಹಾಯ ಯಾಚಿಸಿದ್ದಾರೆ. ಪುರಸಭೆ ಸದಸ್ಯರಾದ ಎನ್.ರಾಜಣ್ಣ, ಎಂ. ನಾರಾಯಣಸ್ವಾಮಿ, ಮಾಜಿ ಸದಸ್ಯ ನಿಸಾರ್ ಅಹಮ್ಮದ್, ಏಜಾಜ್ ಅಹಮದ್, ಪಿಪಿಆರ್ ರಮೇಶ್, ಜಗದೀಶ್, ಹರೀಶ್, ಮುನಿ ನಾರಾಯಣ ಇತರರು ಇದ್ದರು.