ದಾಸ್ಯ ಬಿಡುಗಡೆಗೆ ಹೋರಾಡಿದ ರಾಷ್ಟ್ರಪಿತ

2bkl1- Mankalu vaidya
Published on

ಭಟ್ಕಳ: ಸತ್ಯ, ಅಹಿಂಸೆ, ನ್ಯಾಯ ಮತ್ತು ಅಸಹಕಾರ ಹೋರಾಟದ ಮೂಲಕವೇ ಆಂಗ್ಲರನ್ನು ಮಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಾನವತಾವಾದಿ. ದೇಶದ ದಾಸ್ಯ ಬಿಡುಗಡೆಗೆ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಶತಕೋಟಿ ನಮನ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.


ಸೋಮವಾರ ತಮ್ಮ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿಯವರ ಜನ್ಮದಿನ ಆಚರಿಸಿ ಮಾತನಾಡಿದರು.
ದೇಶದ ಎರಡನೇ ಪ್ರಧಾನಿ, ಸರಳತೆಯ ಸಂತ ಭಾರತರತ್ನ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಸೇವೆ ಅಪಾರ ಎಂದರು. ಬಳಿಕ ಇಬ್ಬರು ಮಹಾನ್ ನಾಯಕರ ಭಾವಚಿತ್ರಕ್ಕೆ ಸಚಿವರು ಪುಷ್ಪ ಸಮರ್ಪಣೆ ಮಾಡಿ ನಮನ ಸಲ್ಲಿಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಇಬ್ಬರು ನಾಯಕ ಕುರಿತು ವಿವರಣೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಸದಸ್ಯರು, ಜನತಾ ಬ್ಯಾಂಕ್​ನ ನಿರ್ದೇಶಕರಾದ ತಿಮ್ಮಪ್ಪ ನಾಯ್ಕ, ವೆಂಕಟ್ರಮಣ ಮೊಗೇರ, ಅಲ್ಬರ್ಟ ಡಿಕೋಸ್ತಾ, ಕಾಯ್ಕಿಣಿ ಗ್ರಾಪಂ ಸದಸ್ಯ ಭಾಸ್ಕರ ನಾಯ್ಕ, ಶ್ರೀಧರ ನಾಯ್ಕ, ಮಂಜುನಾಥ ನಾಯ್ಕ ಬೆಳಕೆ, ದೇವಿದಾಸ ಆಚಾರಿ, ಸುರೇಶ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net