ಕುರಿ ಮೈ ತೊಳೆಯಲು ಹೋದ ಅಪ್ಪ ಮಗ ಕೆರೆಯಿಂದ ವಾಪಾಸ್ ಬರಲೇ ಇಲ್ಲ....

Published on

ಕನಕಪುರ: ಕೆರೆಯಲ್ಲಿ ಕುರಿ ಮೈತೊಳೆಯಲು ಹೋಗಿದ್ದ ಅಪ್ಪ ಮಗ ಇಬ್ಬರೂ ಆಕಸ್ಮಿಕವಾಗಿ ಕೆರೆಗೆ ಬಿದ್ದು ಧ ಮೃತಪಟ್ಟಿರುವ ಘಟನೆ ತಾಲೂಕಿನ ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಸಂಭವಿಸಿದೆ.

ಸಾತನೂರು ಹೋಬಳಿ ಕುರುಬರಹಳ್ಳಿಯ ಸರ್ಕಲ್‌ ಕೆರೆಯಲ್ಲಿ ರಾಜು(46) ಮತ್ತರ ಮಗ ಪ್ರಸನ್ನ(25) ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ನತದೃಷ್ಟರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ತಾವು ಸಾಕಿರುವ ಕುರಿಗಳನ್ನು ಮೈತೊಳೆಯಲು ಗ್ರಾಮದ ಸರ್ಕಲ್ ಕೆರೆಗೆ ಹೊಡಕೊಂಡು ಹೋಗಿದ್ದಾರೆ. ಕುರಿಗಳ ಮೈತೊಳೆಯುವ ವೇಳೆ ಪಕ್ಕದಲ್ಲಿಯೇ ಇದ್ದ ಕೆರೆಯ ಗುಂಡಿಯೊಳಕ್ಕೆ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಇದನ್ನು ಕಂಡು ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಮೃತ ದೇಹಗಳು ಮೇಲೆ ಬಾರದ ಕಾರಣ ಕನಕಪುರ ಅಗ್ನಿಶಾಮಕದಳಕ್ಕೆ ತಿಳಿಸಿದ್ದು, ಸಿಬ್ಬಂದಿ ಶವಗಳನ್ನು ಮೇಲೆತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net