ಸಾಲಬಾಧೆ ತಾಳದೆ ರೈತ ನೇಣಿಗೆ ಶರಣು

raita
ನಾಗರಾಜಾಚಾರಿ (60)
Published on

ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿದ್ದಾನೆ.

ಗ್ರಾಮದ ಗೋವಿಂದಾಚಾರಿ ಅವರ ಪುತ್ರ ನಾಗರಾಜಾಚಾರಿ(60) ಆತ್ಮಹತ್ಯೆಗೆ ಶರಣಾದ ರೈತ.

ಶುಕ್ರವಾರ ಬೆಳಗ್ಗೆ ಮುರುಕನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಬೇಬಿ ಗ್ರಾಮದ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ನಾಗರಾಜಾಚಾರಿ ಅವರು ಮುರುಕನಹಳ್ಳಿ ಗ್ರಾಮದ ಒಂದು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ತರಕಾರಿ ಬೆಳೆ ಬೆಳೆದಿದ್ದರು. ಇದಕ್ಕಾಗಿ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50,000 ರೂ.ಸಾಲ, ಮನೆ ಮೇಲೆ ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಜತೆಗೆ ಸಂಘ ಸಂಸ್ಥೆಗಳಲ್ಲೂ ಸಾಲ ಮಾಡಿದ್ದರು.

ಬರಗಾಲದ ಹಿನ್ನೆಲೆಯಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿದ್ದ ಕಾರಣ ಯಾವುದೇ ತರಕಾರಿ ಬೆಳೆ ಬೆಳೆಯಲು ಸಾಧ್ಯವಾಗಿ ರಲಿಲ್ಲ. ಇದರಿಂದ ಸಾಲ ತೀರಿಸುವ ಮಾರ್ಗ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ನಾಗರಾಜಾಚಾರಿ ಅವರ ಪುತ್ರ ಮಂಜುನಾಥ್ ಚಿನಕುರಳಿ ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net