

ಅರಟಾಳ: ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿ ಅಂತಾರಾಜ್ಯ ಮಟ್ಟದ ಪಂದ್ಯಾವಳಿ ನಡೆಸಿ ಯುವಕರಿಗೆ ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಬಾಗಲಕೋಟೆ ಸಿಪಿಐ ಚಂದ್ರಶೇಖರ ಚಿಕ್ಕೋಡಿ ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಶ್ರೀಹನುಮಾನ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರೈತ ಹಚ್ಚಿದ ಸಿಂಧೂರ ತಿಲಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡವ, ಶ್ರೀಮಂತ ಎನ್ನದೇ ಎಲ್ಲರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಶಿಕ್ಷಣ ಪಡೆದವರು ರಾಷ್ಟ್ರಕ್ಕೆ ಕೀರ್ತಿ ತರುವಂತವರಾಗಲಿ. ಅನ್ನ ನೀಡುವ ರೈತ ಹಾಗೂ ಗಡಿಕಾಯುವ ಸೈನಿಕರಿಗೆ ಸದಾ ಋಣಿಯಾಗಿರಬೇಕು ಎಂದರು.
ಸಂಗಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ, ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ತಾಪಂ ಮಾಜಿ ಸದಸ್ಯ ಮಲ್ಲಪ್ಪ ಡಂಗಿ, ಸಿದ್ರಾಮ ಪೂಜಾರಿ, ಸತ್ತೆಪ್ಪ ಬಿರಾದಾರ, ರಾವಸಾಬ ಬಿರಾದಾರ, ಸಚಿನ ಡಂಗಿ, ಡಾ.ಶಿವಾನಂದ ರೇವಶೆಟ್ಟಿ, ಮಹಾಂತೇಶ ತೇಲಿ, ಹನುಮಂತ ತೇಲಿ, ರಾಜು ಬಿರಾದಾರ, ಆನಂದ ಚಮಕೇರಿ, ಬಸವರಾಜ ಯಳ್ಳುರ, ಯಲ್ಲಪ್ಪ ಕರಿಗಾರ, ಚಿದಾನಂದ ರೇವಶೆಟ್ಟಿ ಇತರರಿದ್ದರು. ಅರ್ಜುನ ಬಿರಾದಾರ ನಿರೂಪಿಸಿದರು. ಮಹಾದೇವ ಚಮಕೇರಿ ವಂದಿಸಿದರು.