ರೈತನೇ ಮೊದಲ ಕೃಷಿ ವಿಜ್ಞಾನಿ: ಮಾಜಿ ಸಚಿವ ಮುರುಗೇಶ ನಿರಾಣಿ

The farmer is the first agricultural scientist, Former Minister Murugesh Nirani
ಮಹಾರಾಷ್ಟ್ರದ ಬಾರಾಮತಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಮುಧೋಳ ರೈತರ ತಂಡ ಭೇಟಿ ಸುಭಾಸ ಶಿರಬೂರ, ಎನ್.ವಿ.ಪಡಿಹಾರ್, ನ್ಯಾಯವಾದಿ ಆರ್.ಡಿ.ಹಳಿಂಗಳಿ ಇದ್ದರು.
Published on

ಮುಧೋಳ : ಕೃಷಿ ಅಧ್ಯಯನ ಪ್ರವಾಸ ರೈತರಲ್ಲಿ ಉತ್ಸಾಹ ಬೆಳೆಸುತ್ತದೆ. ಹೊಸಹೊಸ ಪ್ರಯೋಗಗಳಿಗೆ ಸಜ್ಜುಗೊಳಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಸರ್ಕಾರ, ಸಂಘ ಸಂಸ್ಥೆಗಳು, ಕೃಷಿ ಆಧಾರಿತ ಉದ್ದಿಮೆಗಳು, ಬ್ಯಾಂಕುಗಳು ರೈತರನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಕಳಿಸಿಕೊಡಬೇಕು ಎಂದು ಮಾಜಿ ಸಚಿವ, ನಿರಾಣಿ ಸಮೂಹದ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದರು.

ಮಹಾರಾಷ್ಟ್ರ ರಾಜ್ಯದಲ್ಲಿ ನಾಲ್ಕು ದಿನ ಕೃಷಿ ಅಧ್ಯಯನ ಪ್ರವಾಸ ಮಾಡಿ ಮರಳಿ ಬಂದ ರೈತರನ್ನು ಸ್ವಾಗತಿಸಿ ಅವರು ಮಾತನಾಡಿದರು.ರೈತ ಮೊದಲು ಕೃಷಿ ವಿಜ್ಞಾನಿ ಎಂಬ ಮಾತೊಂದಿದೆ. ಸೂಕ್ತ ಸಮಯಕ್ಕೆ ಉಳುಮೆ ಮಾಡುವ, ಉತ್ತಮ ಬೀಜಗಳನ್ನು ಕಾಯ್ದು ಇಡುವ, ಸಕಾಲಕ್ಕೆ ರಾಶಿ ಮಾಡುವ ವಿಧಾನಗಳನ್ನು ರೈತ ಪ್ರಯೋಗಶೀಲಯಿಂದ ಕಲಿತುಕೊಂಡಿದ್ದಾನೆ.ಬೆಳೆದ ಬೆಳೆಯನ್ನು ಎಲ್ಲರೊಂದಿಗೆ ಹಂಚಿಕೊಂಡು ಊಟ ಮಾಡುವುದು ನೇಗಿಲ ಯೋಗಿಯ ಧರ್ಮವಾಗಿದೆ ಎಂದು ನಿರಾಣಿ ಹೇಳಿದರು.

ನಿರಾಣಿ ಸಕ್ಕರೆ ಕಾರ್ಖಾನೆಯ ಪರವಾಗಿ ಎರಡು ನೂರು ರೈತರನ್ನು ಅಧ್ಯಯನಕ್ಕೆ ಕಳಿಸಿಕೊಡಲಾಗಿತ್ತು. ಮಹಾರಾಷ್ಟ್ರದ ಪಾಟಸ್ಕರ್ ಸಕ್ಕರೆ ಕಾರ್ಖಾನೆ, ಉರುಳಿ ಕಾಂಚನ ಕಷಿ ಕ್ಷೇತ್ರ, ಬಾರಾಮತಿಯ ಕೃಷಿ ವಿಜ್ಞಾನ ಕೇಂದ್ರ, ರಾಹುರಿ ಕಷಿ ವಿದ್ಯಾಪೀಠ ಹಾಗೂ ಜೈನ್ ಇರಿಗೇಷನ್ ಸಂಸ್ಥೆಗೆ ಭೇಟಿ ನೀಡಿ ಬಂದ ರೈತರು ತಮ್ಮ ಅನುಭವವನ್ನು ಉತ್ಸಾಹದಿಂದ ವಿವರಿಸಿದರು.

ಮಹಾರಾಷ್ಟ್ರ ರೈತರು ಪ್ರತಿ ಎಕರೆಗೆ 80ರಿಂದ120 ಟನ್ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಶ್ರದ್ದೆ ಭಕ್ತಿಯಿಂದ ಅವರು ಕೃಷಿ ಕಾರ್ಯ ಮಾಡುತ್ತಿರುವುದು ಬಹಳ ಮೆಚ್ಚುಗೆಯಾಯಿತು. ನೀರು ಮಿತವಾಗಿ ಬಳಸುವ, ಭೂಮಿ ಸವಳು ಆಗದಂತೆ ಕಾಪಾಡಿಕೊಳ್ಳುವ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಈ ಪ್ರವಾಸ ನಮ್ಮಲ್ಲಿ ಬಹಳ ಉತ್ಸಾಹ ತುಂಬಿದೆ ಎಂದು ರೈತರು ವಿವರಿಸಿದರು. ಕಷಿ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದ ರೈತ ಮುಖಂಡ ವಿವರಿಸಿದರು.

ಸುಭಾಷ್ ಶಿರಬೂರ್ ಮಾತನಾಡಿ, ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿದೆವು. ಅಲ್ಲಿ ಕಬ್ಬು

ಸಾಗಿಸುವುದಕ್ಕೆ, ಕಟಾವಿಗೆ ಲಗಾನಿ ಕೊಡಬೇಕಾಗಿಲ್ಲ. ಕಬ್ಬು ನಾಟಿ ಮಾಡಿದ ದಿನಾಂಕ ಮತ್ತು ಸಮಯವನ್ನು ನೋಂದಣಿ ಮಾಡಲಾಗುತ್ತದೆ. ತಾರತಮ್ಯವಿಲ್ಲದೆ ಕಬ್ಬು ಸಾಗಾಣಿಕೆ ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಇದು ಜಾರಿಯಾಗಬೇಕು ಎಂದು ತಿಳಿಸಿದರು. ರೈತ ಮುಖಂಡರಾದ ದಾನಪ್ಪಗೋಳ, ಮಾದೇವ ಮುರನಾಳ, ಚೆನ್ನಪ್ಪ ಪುರಾಣಿಕ ಪ್ರವಾಸದ ಅನುಭವ

ಸಂಗಮೇಶ ನಿರಾಣಿ, ಎನ್.ವಿ.ಪಡಿಹಾರ್, ನ್ಯಾಯವಾದಿ ಆರ್.ಡಿ.ಹಳಿಂಗಳಿ ಇದ್ದರು.ಹಾಗೂ ಪ್ರವಾಸ ಕೈಗೊಂಡ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net