ಸಿದ್ದರಾಮಯ್ಯ ಅವರ ಮೇಲಿದ್ದ ನಂಬಿಕೆಯನ್ನು ಹುಸಿ ಮಾಡಿದೆ, ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿದೆ

Siddaramaiah and Prathap Simha
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಸೈದ್ಧಾಂತಿಕವಾಗಿ ವಿರೋಧವಿದೆ ಅಷ್ಟೆ. ಅಭಿವೃದ್ಧಿ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ತಮಗೆ ಬಂದ ಸೈಟ್‌ಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆ ಎಂದು ನಾನು ನಂಬಿದ್ದೆ. ಆದರೆ ಆ ರೀತಿ ಮಾಡದೆ 62 ಕೋಟಿ ರೂ. ಪರಿಹಾರ ಕೇಳಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಇದು ನನಗೆ ಸಿದ್ದರಾಮಯ್ಯ ಅವರ ಮೇಲಿದ್ದ ನಂಬಿಕೆಯನ್ನು ಹುಸಿ ಮಾಡಿದೆ, ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿದೆ ಎಂದರು.
ಸಿದ್ದರಾಮಯ್ಯಗೆ ದುಡ್ಡಿನ ಹಪಾಹಪಿ ಇಲ್ಲ ಎಂದು ನಾನು ಬೇರೆ ಪಕ್ಷದಲ್ಲಿ ಇದ್ದರೂ ಹೇಳುತ್ತಿದ್ದೆ. ಆದರೆ, ಈ ಪ್ರಕರಣದಲ್ಲಿ ದುಡ್ಡಿನ ವಿಚಾರದಲ್ಲೂ ಸಿಎಂ ಬಗ್ಗೆ ಬೇಸರ ಉಂಟಾಗಿದೆ. ಬಿಜೆಪಿ ಆಡಳಿತದ ಕಾಲದಲ್ಲೂ ಮಣ್ಣು ತಿನ್ನುವ ಕೆಲಸ ಆಗಿದೆ. ಎಲ್ಲವನ್ನೂ ಸೇರಿಸಿ ತನಿಖೆ ಮಾಡಿಸಬೇಕಿತ್ತು. ಆದರೆ ಈಗ ಏನಾಗಿದೆ ನೋಡಿ ಎಂದು ಬೇಸರ ಹೊರಹಾಕಿದರು.

ವೈಯುಕ್ತಿಕವಾಗಿ ಸಿದ್ದರಾಮಯ್ಯ ಅವರನ್ನು ನಾನು ಭ್ರಷ್ಟಾಚಾರಿ ಎಂದು ಹೇಳುವುದಿಲ್ಲ. 14 ಸೈಟ್ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಮೈಸೂರಿಗನಾಗಿ ನನಗೆ ಬೇಸರ ತರಿಸಿದೆ. ನನ್ನ ಇಪ್ಪತ್ತೈದು ವರ್ಷಗಳ ಅನುಭವದಲ್ಲಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಕಳಂಕ ಹೊತ್ತಿದ್ದನ್ನು ನೋಡಿಲ್ಲ. ಮುಡಾ ಸೈಟ್ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಸರಿಯಲ್ಲ. ಸಿದ್ದರಾಮಯ್ಯ ಅವರದ್ದು ತಪ್ಪೇ ಇಲ್ಲ ಎಂದುಕೊಳ್ಳೋಣ. ಆರೋಪ ಬಂದಾಗ ಕೂಡಲೇ ಸೈಟ್ ಸರೆಂಡರ್ ಮಾಡಿ ತನಿಖೆ ಮಾಡಿಸಬೇಕಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net