

ಕಟಕೋಳ: ಗ್ರಾಮ ದೇವತೆಯರ ಜಾತ್ರೆ ಮಂಗಳವಾರ ಅದ್ದೂರಿಯಾಗಿ ಆರಂಭಗೊಂಡಿತು. ಮೊದಲನೆಯ ದಿನ ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ತವಾಗಿ ಸೋಮವಾರ ಊರಿನ ಹೆಣ್ಣುಮಕ್ಕಳು ಸೇರಿ ಕಡಬು ತಯಾರಿಸಿದರು. ಮಂಗಳವಾರ ಸಂಜೆ ಅಂಕಿಚೌಡಿಯ ಮುಂಭಾಗದಲ್ಲಿ ಊರಿನ ಮಹಿಳೆಯರು ಸೀರೆಯಲ್ಲಿ ಕಂಗೊಳಿಸುತ್ತ ಆರತಿಯೊಂದಿಗೆ ಬಂದು ಉಡಿ ತುಂಬಿಸಿಕೊಂಡರು. ಜಾತ್ರಾ ಕಮಿಟಿ ಪ್ರಮುಖರು ಊರಿನ ಯುವಕರು ಉಡಿ ತುಂಬುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು. ಜಾತ್ರೆ ಹಿನ್ನೆಲೆಯಲ್ಲಿ ಊರಿನ ಮನೆಗಳನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿದೆ.