ಶ್ರೀ ಚಾಮುಂಡೇಶ್ವರಿ ಅಮ್ಮನವರ ಜಾತ್ರೆ ಸಂಪನ್ನ

IMG_20250305_141028
ಹೊನ್ನಕುಮಾರನಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆ ನಡೆಯಿತು.
Published on

ಗಂಡಸಿ: ಹೋಬಳಿಯ ಹೊನ್ನಕುಮಾರನಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಅಮ್ಮನವರ 88ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಸೋಮವಾರ ಬೆಳಗ್ಗೆ 8 ಗಂಟೆಗೆ ಗ್ರಾಮದ ಶ್ರೀಚಾಮುಂಡೇಶ್ವರಿ ದೇವಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಭೈರವೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀದೇವಿ ಅಮ್ಮನವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ರಾತ್ರಿ 8 ಗಂಟೆಗೆ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯೊಂದಿಗೆ ಅಮ್ಮನವರಿಗೆ ಗ್ರಾಮದ ಮಹಿಳೆಯರಿಂದ ಆರತಿ ಸೇವೆ ಸಲ್ಲಿಸಲಾಯಿತು. ಸಂಜೆ 6 ಗಂಟೆಗೆ ಗ್ರಾಮದ ಕಲ್ಯಾಣಿ ಬಳಿ ಅಮ್ಮನವರ ಉತ್ಸವ ಮೂರ್ತಿ, ಕಳಸಕ್ಕೆ ವಿಧಿ-ವಿಧಾನಗಳೊಂದಿಗೆ ಗಂಗಸ್ನಾನ ನೆರವೇರಿಸಿ ವಿದ್ಯುತ್‌ದೀಪಗಳಿಂದ ಅಲಂಕೃತಗೊಂಡ ಬೆಳ್ಳಿ ರಥದ ಮೇಲೆ ಶ್ರೀ ಅಮ್ಮನವರ ಉತ್ಸವಮೂರ್ತಿಯನ್ನು ಕೂರಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ನರ್ತನ, ತಮಟೆ ವಾದ್ಯ, ಕಹಳೆ, ಚಿಟ್ಟಿ ಮೇಳ, ನಾದಸ್ವರ ವಾದ್ಯ ಹಾಗೂ ಬಣ್ಣ ಬಣ್ಣದ ಮದ್ದು ಗುಂಡಿನ ಸುರಿಮಳೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ 9

ಗಂಟೆಗೆ ಗ್ರಾಮದ ಚಾಮುಂಡೇಶ್ವರಿ ಯುವಕ ಬಳಗದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಾಟಕ ಪ್ರದರ್ಶನದೊಂದಿಗೆ ಜಾತ್ರೆ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net