ಗಂಡ-ಹೆಂಡತಿ ಸಂಸಾರದ ಕಣ್ಣುಗಳು

The eyes of a husband and wife family
ಹುನಗುಂದ ಬಸವ ಮಂಟಪದಲ್ಲಿ ಶ್ರೀಶೈಲ ಪಾದಯಾತ್ರಾ ಸಮಿತಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೊಜಿಸಲಾಗಿತ್ತು. ಅಮರೇಶ್ವವರ ದೇವರು, ಕಿಡಿಯಪ್ಪ ಹೂಲಗೇರಿ, ಜಗದೇಶ ಬಳ್ಳೊಳ್ಳಿ ಇದ್ದಾರೆ.
Published on

ಹುನಗುಂದ: ಗಂಡ-ಹೆಂಡತಿ ಸಂಸಾರದ ಎರಡು ಕಣ್ಣುಗಳಂತೆ. ಸಂಸ್ಕಾರಯುತ ಜೀವನ ನಡೆಸಿ ಅತ್ತೆ ಮಾವರನ್ನು ತಂದೆ-ತಾಯಿಯಂತೆ ಕಾಣಬೇಕು ಎಂದು ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಠದ ಬಸವ ಮಂಟಪದಲ್ಲಿ ಬೋರಮ್ಮ ತಾಯಿ ಮಹಾಪೂಜೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಂಸಾರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಅನಿವಾರ್ಯ. ಅವುಗಳನ್ನು ಲೆಕ್ಕಿಸದೆ ಶರಣರ ತತ್ವ ಸಂದೇಶಗಳನ್ನು ಮೈಗೂಡಿಸಿಕೊಂಡು ಚಿಕ್ಕ-ಚೊಕ್ಕ ಆದರ್ಶ ಕುಟುಂಬವಾಗಬೇಕು ಎಂದರು.

ವೇಮೂ, ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ಶರಣರ ಮತ್ತು ಜಂಗಮ ಪಾವನ ಪಾದದ ಜತೆಗೆ ಸರ್ವಜನಾಂಗದ ಸಮ್ಮುಖದಲ್ಲಿ, ದಾನ-ಧರ್ಮದ ಮೂಲಕ ನಡೆಸುವ ಇಂಥ ಸಾಮೂಹಿಕ ಕಾರ್ಯಕ್ರಮದಲ್ಲಿ ಮದುವೆಯಾದ ನೀವು ಪುಣ್ಯವಂತರು. ಜನಿಸುವ ಮಕ್ಕಳಿಗೆ ಉತ್ತಮ ಸಂಸ್ಕಾರದ ಜತೆಗೆ ಅವರ ಬದುಕು ಹಸನಾಗುವಂತಗೆ ಶಿಕ್ಷಣ ನೀಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಇದೇ ವೇಳೆ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನವಜೋಡಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಕ್ಷತೆ ಹಾಕಿ ಶುಭ ಹಾರೈಸಿದರು.

ವೇಮೂ ವೀರೇಶ ಹಿರೇಮಠ ಸಾಮೂಹಿಕ ಮದುವೆ ನೆರವೇರಿಸಿದರು. ನಾಲ್ಕು ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿ ಅಧ್ಯಕ್ಷ ವೀರೇಶ ಕುರ್ತಕೋಟಿ ಅಧ್ಯಕ್ಷತೆ ವಹಿಸಿದ್ದರು.

ಗಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಈಶಪ್ಪ ಹವಾಲ್ದಾರ, ಉಪಾಧ್ಯಕ್ಷ ಕಿಡಿಯಪ್ಪ ಹೂಲಗೇರಿ, ಜಗದೇಶ ಬಳ್ಳೊಳ್ಳಿ, ಕಾರ್ಯದರ್ಶಿ ಮಹಾಂತೇಶ ಹೊದ್ಲೂರ, ಶರಣಯ್ಯ ತಾವರಗೇರಿಮಠ, ಶೇಖರಯ್ಯ ಪುರದಯ್ಯನನಮಠ, ಈರಪ್ಪ ನಾಗೂರ, ಮುತ್ತಪ್ಪ ಪಲ್ಲೇದ, ಮಲ್ಲನಗೌಡ ಪಾಟೀಲ, ಪರಸಪ್ಪ ಮಜ್ಜಗಿ, ಶಿವಾನಂದ ಬಾದವಾಡಗಿ, ಶಿಕ್ಷಕ ಸಂಗಮೇಶ ವೀರಾಪೂರ, ಮಲ್ಲಪ್ಪ ಪಲ್ಲೇದ, ಸಂಗಪ್ಪ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ನಾಗನಗೌಡ ನಾಡಗೌಡ, ಪ್ರಭು ಬೆಳ್ಳಿಹಾಳ, ಮಹಾಂತೇಶ ಬಾವಿಕಟ್ಟಿ, ಮುತ್ತಪ್ಪ ಜವಳಗೇರಿ, ಮುತ್ತಪ್ಪ ಹಳಪೇಟಿ, ಶರಣು ಹಳಪೇಟಿ, ಶಂಕ್ರು ಬಡಿಗೇರ, ಶಿವನಗೌಡ ಚಿಂತಕಮಲದಿನ್ನಿ, ಮುತ್ತು ದರಗಾದ, ಪ್ರಕಾಶ ಹಳಪೇಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net