

ಹುಬ್ಬಳ್ಳಿ : ಹಿರಿಯ ನಾಗರಿಕರು ರಾಷ್ಟ್ರದ ಸಂಪತ್ತು ಎಂದು ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ರಾಜಧಾನಿ ಕಾಲನಿಯಲ್ಲಿ ಏರ್ಪಡಿಸಿದ್ದ ಪ್ರೋಬಸ್ ಕ್ಲ್ಲ್ ಮಾಸಿಕ ಸಭೆ, ಶಿಕ್ಷಕರ ಮತ್ತು ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಅನುಭವದ ನುಡಿಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ. ಮಕ್ಕಳು ಮಾನವೀಯ ಮೌಲ್ಯಗಳನ್ನು ಅರಿತು, ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು. ಜ್ಞಾನಾರ್ಜನೆ ಜೀವನದ ಗುರಿಯಾಗಿರಲಿ ಎಂದು ಸಲಹೆ ನೀಡಿದರು.
ಜನ್ಮದಿನ ಆಚರಿಸಿಕೊಂಡ ಲೀಲಾವತಿ ಹೇಮಗಿರಿ ಪಟ್ಟಣಶೆಟ್ಟಿ ದಂಪತಿ, ಚನ್ನಬಸಪ್ಪ ಶೆಟ್ಟರ, ಬಸವರಾಜ ಲಿಂಗಶೆಟ್ಟರ, ನಾರಾಯಣ ಸೋಳಂಕಿ, ಗಣಪತಸಾ ಹಬೀಬ, ರಘು ಮುಗಜಿಕೊಂಡಿ, ಶೇಖರ ಹೈಬತ್ತಿ, ತೋಟಪ್ಪ ಮೆಕ್ನಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎಸ್.ಬಿ.ಹೊಂಬಳ, ಶಿಕ್ಷಕರು ಮತ್ತು ಇಂಜನಿಯರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಎಂ.ಎ. ಹಿರೇಮಠ, ಎಸ್.ವಿ. ಪಟ್ಟಣಶೆಟ್ಟಿ, ಎಸ್.ಎಸ್. ಕೇಶಪ್ಪನಟ್ಟಿ, ಚನ್ನಬಸಪ್ಪ ಧಾರವಾಡಶೆಟ್ಟರ, ಐ.ಎಸ್. ಹಂದಿಗೋಳ, ಲಕ್ಷ್ಮೀ ಮಂಗಳವೇಡಿ ಹಾಗೂ ಇತರರು ಉಪಸ್ಥಿತರಿದ್ದರು.
ಮೀರಾ ರಾವ್ ಸ್ವಾಗತಿಸಿದರು. ಆರ್. ಸಿ. ಹಲಗತ್ತಿ ಪರಿಚಯಿಸಿದರು. ಎಂ.ಪಿ. ಕುಂಬಾರ ನಿರೂಪಿಸಿದರು. ಎನ್.ಬಿ. ಬೆಳ್ಳಿಗಟ್ಟಿ ವಂದಿಸಿದರು.