ಮಾದರಿಯಾದ ಕೊಂಜಾಡಿ ಭಜನಾ ತಂಡ

sid
Published on

ಕೆ.ಸಂಜೀವ ಆರ್ಡಿ ಆರ್ಡಿ ಸಮೀಪದ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಲವಾರು ವರ್ಷಗಳಿಂದ ಧಾರ್ಮಿಕ, ಸಾಮಾಜಮುಖಿ ಸೇರಿದಂತೆ ಹಲವಾರು ಕಾರ್ಯಕ್ರಮಗಳೊಂದಿಗೆ ಮಾದರಿಯಾಗಿ ಗುರುತಿಸಿಕೊಂಡಿದೆ. ಸಮಾಜಮುಖಿ ಕಾರ್ಯ: ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯು ಮಹಿಳೆ ಮತ್ತು ಪುರುಷರ ಎರಡು ಪ್ರತ್ಯೇಕ ತಂಡಗಳನ್ನು ಹೊಂಡಿದೆದ. ಪ್ರತಿ ವರ್ಷ ಸುತ್ತಮುತ್ತಲಿನ ಮಕ್ಕಳಿಗೆ ಭಜನಾ ಕಲಿಕಾ ತರಬೇತಿ ನೀಡಲಾಗುತ್ತದೆ. ಭಜನಾ ತಂಡದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶೈಕ್ಷಣಿಕ ಪುರಸ್ಕಾರ, ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಭಜನಾ ತಂಡಗಳಲ್ಲಿ ಬಾಲಕ,ಬಾಲಕಿಯರು ಸೇರಿದಂತೆ 150 ಮಂದಿಯನ್ನು ಹೊಂದಿದ್ದು, ಈ ಭಾಗದಲ್ಲಿರುವ ಅತಿ ದೊಡ್ಡ ಭಜನಾ ತಂಡವೆಂದು ಗುರುತಿಸಿಕೊಂಡಿದೆ. ವನಮಹೋತ್ಸವ, ಧಾರ್ಮಿಕ ಕೇಂದ್ರಗಳ ಸ್ವಚ್ಛತೆ, ಪರಿಸರ ಜಾಗೃತಿ, ಭಜನಾ ಕಲಿಕಾ ತರಬೇತಿ, 12 ದಿನಗಳ ಪರ್ಯಾಂತ ಭಜನೆಯೊಂದಿಗೆ ವಾರ್ಷಿಕ ಅಖಂಡ ಭಜನಾ ಮಂಗಲೋತ್ಸವ, ಶ್ರಮದಾನ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ತಂಡ ಸದಸ್ಯರು ಸಕ್ರಿಯರಾಗಿದ್ದಾರೆ. ಪ್ರತಿ ವರ್ಷ ಧಾರ್ಮಿಕ ಕ್ಷೇತ್ರಗಳ ದರ್ಶನ ಹಮ್ಮಿಕೊಳ್ಳುತ್ತಿದೆ. ಈ ಬಾರಿ ಕೊಲ್ಹಾಪುರ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಜ್ಯೋತಿಭಾ ದೇವಳ, ಪಂಡರಪುರ ಪಾಂಡುರಂಗ ದೇವಳ, ಗಾಣಿಗಪುರದ ದತ್ತಾತ್ರೇಯ ದೇವಳ ಹಾಗೂ ಇನ್ನಿತರ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ಭಜನಾ ಸಂಕೀರ್ತನೆ ನಡೆಸಿ ದೇವರಿಗೆ ಭಜನಾ ಸೇವೆ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಜನೆ ಮೂಲಕ ಧಾರ್ಮಿಕ ಶ್ರದ್ಧೆ ಹೆಚ್ಚುತ್ತಿದೆ. ಮಕ್ಕಳಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಬಗ್ಗೆ ಆಸಕ್ತಿ ಮೂಡಲು ಭಜನಾ ತಂಡಗಳು ಸ್ಫೂರ್ತಿ ನೀಡುತ್ತವೆ. ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣೆಗೆಯಾಗಿದೆ. - ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ. ಉಪಾಧ್ಯಕ್ಷರು, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net