ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕಾರ್ಯ ಸ್ಮರಣೀಯ

The establishment of educational institutions is memorable
ಆಲಮಟ್ಟಿಯ ಆರ್​.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ ವಚನ ಸಂರಣಾ ದಿನ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಎ.ಡಿ. ಅಮರವಾಡಗಿ ಮಾತನಾಡಿದರು. ಸಾಹಿತಿ ಮೋಹನ ಕಟ್ಟಿಮನಿ, ಜಿ.ಎಂ. ಕೋಟ್ಯಾಳ ಇತರರಿದ್ದರು.
Published on

ಆಲಮಟ್ಟಿ: ಮನೆ, ಮಠ, ದೇಗುಲಗಳಲ್ಲಿ ಪೂಜೆಗೆ ಸೀಮಿತವಾಗಿ ನಶಿಸುತ್ತಿದ್ದ 12ನೇ ಶತಮಾನದ ಶರಣರು ತಾಡೋಲೆಗಳಲ್ಲಿ ರಚಿಸಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಕೃತಿ, ಸಂಪುಟಗಳಲ್ಲಿ ಹೊರ ತಂದ ಡಾ.ಫ.ಗು.ಹಳಕಟ್ಟಿ ಅವರು ಜೀವನದುದ್ದಕ್ಕೂ ಸರಳ ಫಕೀರನಂತೆ ಬದುಕು ಸಾಗಿಸಿದರು ಎಂದು ಸಾಹಿತಿ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ 144 ನೇ ಜನ್ಮದಿನದ ಅಂಗವಾಗಿ ಸ್ಥಳಿಯ ಆರ್​.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ ನಿಡಗುಂದಿ ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಂರಣಾ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಬಿಎಲ್​ಡಿಇ ಶಿಣ ಸಂಸ್ಥೆ ಮತ್ತು ಸಿದ್ಧೇಶ್ವರ ಬ್ಯಾಂಕ್​ ಸ್ಥಾಪಿಸಿದ ಹಳಕಟ್ಟಿಯವರು ಲಿಂಗೈಕ್ಯರಾಗಿದ್ದಾಗ ಅವರ ಸಮಾಧಿಗಾಗಿ ಯಾರೂ ಜಾಗ ನೀಡಲಿಲ್ಲ. ಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ತಾವು ರಚಿಸಿದ ಗ್ರಂಥ ಮಾರಾಟ ಮಾಡಿ ಹಳಕಟ್ಟಿ ಅವರ ಸಮಾಧಿ ಅಭಿವೃದ್ಧಿಗೊಳಿಸಿದರು ಎಂದರು.

ಬಿಎಲ್​ಡಿಇ ಸಂಸ್ಥೆ ಸ್ಥಾಪಿಸಿ 10ಕ್ಕೂ ಹೆಚ್ಚು ಕನ್ನಡ ಶಾಲೆ ಆರಂಭಿಸಿದರು. ಮುಚ್ಚುತ್ತಿದ್ದ ಬಾಸೆಲ್​ ಮಿಷನ್​ ಆಂಗ್ಲಮಾಧ್ಯಮ ಶಾಲೆಯನ್ನು ಬಿಎಲ್​ಡಿಇ ಸಂಸ್ಥೆಗೆ ಪಡೆದುಕೊಂಡರು. ಆ ಕಾಲದಲ್ಲಿ ಕಾನೂನು ಪದವಿ ಪಡೆದಿದ್ದರೂ ಇವರ ಕುಟುಂಬ ಅನೇಕ ಬಾರಿ ಊಟಕ್ಕೂ ಪರದಾಡಿತ್ತು ಎಂದರು.

ತಹಸೀಲ್ದಾರ್​ ಎ.ಡಿ. ಅಮರವಾಡಗಿ ಮಾತನಾಡಿ, ಈಗಿನ ಪೀಳಿಗೆಗೆ ಶರಣರ ವಚನಗಳನ್ನು ನೀಡಲು ಶ್ರಮಿಸಿದ ಫ.ಗು.ಹಳಕಟ್ಟಿ ಜಯಂತಿಯನ್ನು ವಚನ ಸಂರಣಾ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು ಸ್ಮರಣೀಯ ಎಂದರು.

ಮುಖ್ಯಶಿಕ ಜಿ.ಎಂ. ಕೋಟ್ಯಾಳ ಅಧ್ಯತೆ ವಹಿಸಿದ್ದರು. ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ಯು.ಎ.ಬಶೆಟ್ಟಿ, ಮಂಜುನಾಥ ಹಿರೇಮಠ, ಬಿ.ಎಸ್​.ಅವಟಿ, ಬಿ.ಎಸ್​. ಯರವಿನತೆಲಿಮಠ, ಎಸ್​.ಐ.ಗಿಡ್ಡಪ್ಪಗೋಳ, ಎನ್​.ಎಸ್​. ಬಿರಾದಾರ, ಐ.ಎಲ್​.ಶಿಂಧೆ, ರಾಜಕುಮಾರ ರಾಠೋಡ, ತನುಜಾ ಪೂಜಾರಿ, ಬಿ.ಡಿ. ಚಲವಾದಿ ಇದ್ದರು.

ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಫ.ಗು.ಹಳಕಟ್ಟಿ ಕುರಿತು ಏರ್ಪಡಿಸಿದ್ದ ಭಾಷಣ, ವಚನ ಕಂಠಪಾಠ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net