ಸವರ್ಜ್ಞರ ತ್ರಿಪದಿಗಳ ಸಾರ ಸರ್ವಕಾಲಿಕ

The essence of Savarjna's tripadhas is eternal
ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞರ ಜಯಂತಿಯಲ್ಲಿ ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ. ಮಾಧವ ಗುಡಿ, ಪದಾಧಿಕಾರಿಗಳಾದ ಸುರೇಶ ಜತ್ತಿ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ ಇತರರಿದ್ದರು.
Published on

ವಿಜಯಪುರ: ಮೂರು ಸಾಲಿನ ಪದ್ಯ ಬರೆಯುವ ಮೂಲಕ ತ್ರಿಪದಿಯ ಸಾರ್ವಭೌಮನೆಂದು ಪ್ರಸಿದ್ಧಿ ಪಡೆದ ಕವಿ ಸರ್ವರು ಎಂದು ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲವನ್ನು ಅರಗಿಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ತ್ರಿಪದಿ ಸಾಹಿತ್ಯವನ್ನು ಉನ್ನತಕ್ಕೆ ಏರಿಸಿದ ಕೀರ್ತಿ ಕವಿ ಸರ್ವಜ್ಞರು ಅವರಿಗೆ ಸಲ್ಲುತ್ತದೆ. ಸವರ್ಜ್ಞರ ತ್ರಿಪದಿಗಳ ಸಾರ ಸರ್ವಕಾಲಿಕವಾಗಿದೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಉಪನ್ಯಾಸಕ ನೀಡಿ, ಸರ್ವನ ತ್ರಿಪದಿಗಳು ಜನರ ಬಾಯಿಯಲ್ಲಿ ಗಾದೆ ಮಾತುಗಳಾಗಿ ನೆಲೆ ನಿಂತಿವೆ. ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ವಿಷಯಗಳನ್ನು ಒಳಗೊಂಡಿದೆ. ಸದ್ಯ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯ ಎಲ್ಲ ಹಂತಗಳಲ್ಲಿ ಪಠ್ಯಕ್ರಮಕ್ಕೆ ಅಳವಡಿಸಿದ್ದು ಸರ್ವರ ಸಾಹಿತ್ಯದ ಮೌಲ್ಯ ಎತ್ತಿ ತೋರಿಸುತ್ತದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಸುರೇಶ ಜತ್ತಿ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ, ಶಿಲ್ಪಾ ಹಂಜಿ, ಅಣ್ಣುಗೌಡ ಬಿರಾದಾರ, ಪರಶುರಾಮ ಚಲವಾದಿ, ರಾಜೇಸಾಬ ಶಿವನಗುತ್ತಿ, ಸಾಬು ನೆರಳೆ, ಪರಶುರಾಮ ಬಗಲಿ, ಮಹಾಂತೇಶ ಮಮದಾಪೂರ, ವಿನೋದಕುಮಾರ ಬಣಜಿಗೇರ, ಆಶಾ ಬಿರಾದಾರ, ಜಿ.ಎಸ್​. ಬಳ್ಳೂರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net