

ರಾಯಬಾಗ: ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯಲ್ಲಿ ಜೀವನಸಾರ ಅಡಗಿದೆ ಎಂದು ಪಂಢರಪುರದ ಗೋಪಾಲ ತುಕಾರಾಮ ವಾಸ್ಕರ ಮಹಾರಾಜರು ಹೇಳಿದರು.
ಪಟ್ಟಣದ ಚೌಗುಲೆ ಕಾಲೇಜು ಆವರಣದಲ್ಲಿ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯರ ಸ್ಮರಣೆ ಹಾಗೂ ಭವ್ಯ ಕೀರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿ, ತಂದೆ-ತಾಯಿಯಲ್ಲಿ ಭಗವಂತನನ್ನು ಕಾಣಬೇಕು. ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಮುಕ್ತಿ ದೊರೆಯುವುದು ಎಂದರು.
ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ, ಉಪಾಧ್ಯಕ್ಷೆ ಭಾರತಿ ಚೌಗುಲೆ, ನಿರ್ದೇಶಕಿ ಐಶ್ವರ್ಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್.ದಿಗ್ಗೆವಾಡಿ, ಎಸ್.ಎ.ನಾಂದಣಿ, ಇಕ್ಬಾಲ್ ತಾಸೆವಾಲೆ, ಎಂ.ಐ.ಬಡಿಗೇರ, ಪಿ.ಡಿ.ಲಂಗೋಟೆ, ಸುನೀಲ ಕೋಳಿಗುಡ್ಡ್ಡ, ಶಿವಾಜಿ ಬೋಯಿ, ಆನಂದ ತೋರು, ರಾಜು ದೇಶಪಾಂಡೆ, ರಾಮ ಇನಾಮದಾರ ಇತರರು ಇದ್ದರು.