

ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಪ್ರಯುಕ್ತ ಪ್ರಜಾಪ್ರಭುತ್ವದ ಅರಿವು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್ ಉದ್ಘಾಟಿಸಿ ಮಾತನಾಡಿ, ಇಡಿ ಪ್ರಪಂಚವೇ ಒಪ್ಪಿಕೊಳ್ಳಬಹುದಾದ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವದ ಮೂಲಭೂತ ತತ್ವಗಳನ್ನು ಹೊಂದಿರುವ ಪ್ರಜಾಪ್ರಭುತ್ವ ಭಾರತೀಯರ ಬದುಕಿಗೆ ಮಾರ್ಗವಾಗಿದೆ. ಇಂದಿನ ಯುವಕರು ತಮ್ಮ ಪರಿಪೂರ್ಣ ಜೀವನಕ್ಕಾಗಿ ಪ್ರಜಾಪ್ರಭುತ್ವದ ಸತ್ವವನ್ನು ಅರಿತುಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿ ದಿವಾಕರ ಶೆಟ್ಟಿ, ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಷ್ಮಾ ರಾವ್ ಕೆ., ಐಕ್ಯೂಎಸಿ ಸಂಚಾಲಕ ಡಾ.ಗಣೇಶ್ ಎಸ್. ಉಪಸ್ಥಿತರಿದ್ದರು. ಸಂಚಾಲಕಿ ಜ್ಯೋತಿ ಸ್ವಾಗತಿಸಿದರು.