ಸೌಹಾರ್ದದಿಂದ ಬಾಳಬೇಕೆನ್ನುವುದೇ ಎಲ್ಲ ಧರ್ಮಗಳ ಸಾರ

29-ಕೆಏನಡಿ-1 ED MILAD
Published on

ಕುಂದಗೋಳ: ಎಲ್ಲ ಧರ್ಮಗಳು ಸೌಹಾರ್ದದಿಂದ ಬಾಳಬೇಕೆಂದು ಸಾರಿವೆ. ಈ ಭಾಗದಲ್ಲಿ ಸಂತ ಶಿಶುನಾಳ ಶರೀಫರು, ಗುರು ಗೋವಿಂದ ಭಟ್ಟರು ಭಾವೈಕ್ಯ ಸಾರಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಅರಿತು ಬಾಳಬೇಕು ಎಂದು ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್ ಹೇಳಿದರು.

ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಹಾಗೂ ಮುಸ್ಲಿಂ ಸಮುದಾಯದವರು ಮಹಮ್ಮದ್ ಪೈಗಂಬರರ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಮೆರವಣಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದ್ದು, ನಮ್ಮ ಹಿರಿಯರು ಪರಸ್ಪರ ಎಲ್ಲ ಧರ್ಮಗಳನ್ನು ಸೌಹಾರ್ದದಿಂದ ಹಬ್ಬಹರಿದಿನಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಅವರ ದಾರಿಯಲ್ಲಿಯೇ ಮಹಾತ್ಮರ ಸಂದೇಶ ಸಾರುತ್ತ ಎಲ್ಲರೂ ಕೂಡಿ ಬಾಳಬೇಕು ಎಂದರು.

ಮೆರವಣಿಗೆಗೆ ಪಂಚಗೃಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಮಹಾಸ್ವಾಮಿಜಿ, ಕಲ್ಯಾಣಪುರದ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಮಹಾಂತ ಮಹಾಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಗೌಡಪ್ಪಗೌಡ ಪಾಟೀಲ, ಶಿವಾನಂದ ಬೆಂತೂರು, ಜಗದೀಶ ಉಪ್ಪಿನ, ಅಂಜುಮನ್ ಅಧ್ಯಕ್ಷ ಖಹೀಂಸಾಬ್ ನಾಲಬಂದ, ಉಪಾಧ್ಯಕ್ಷ ಆಸೀಫ್ ಹರಪನಹಳ್ಳಿ, ಅಕ್ಬರಸಾಬ್ ಗೂಡವಾಲ, ಹಜರತಅಲಿ ನದಾಫ್, ಪಪಂ ಸದಸ್ಯ ಮಲ್ಲಿಕ್ ಶಿರೂರು, ಸಲೀಂ ಕ್ಯಾಲಕೊಂಡ, ಮೆಹಬೂಬಲಿ ನದಾಫ, ಸಲೀಂ ಕಡ್ಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net