ಇಡೀ ದೇಶದಲ್ಲಿ ಬರ ಎದುರಾಗಿದೆ; ಸಿಎಂ

SIDDARAMAIAH cm
Published on

ಚಿತ್ರದುರ್ಗ: ರಾಜ್ಯದಲ್ಲಿ 122 ವರ್ಷಗಳ ನಂತರ ಕಂಡು ಕೇಳರಿಯದ ಕೆಟ್ಟ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕವಾಡಿಗರಹಟ್ಟಿಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿ, 236ರ ಪೈಕಿ 195 ತಾಲೂಕುಗಳನ್ನು ಬರವೆಂದು ಘೋಷಿಸಲಾಗಿದೆ. ಇನ್ನೂ 20 ತಾಲೂಕು ಸೇರ್ಪಡೆಯಾಗಲಿವೆ. 30 ಸಾವಿರಕ್ಕೂ ಹೆಚ್ಚು ಕೋಟಿ ರೂ. ನಷ್ಟವಾಗಿದ್ದು, 42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಕೇಂದ್ರದ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 4,860 ಕೋಟಿ ರೂ. ಪರಿಹಾರದ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳಲ್ಲಿ ಮಳೆಯಾಗದೆ, ದೇಶದಲ್ಲೇ ಬರ ಆವರಿಸಿದೆ. ಮಲೆನಾಡು ಭಾಗಗಳಲ್ಲೇ ತೀವ್ರ ಮಳೆಯ ಕೊರತೆ ಉಂಟಾಗಿದೆ. ಬರ ಪರಿಸ್ಥಿತಿಯನ್ನು ನಾವು ಸಮರ್ಥವಾಗಿ ಎದುರಿಸಲಿದ್ದು, ಜನರ ಗುಳೆ ತಪ್ಪಿಸಿ ಉದ್ಯೋಗ ನೀಡುವುದು, ಜಾನುವಾರುಗಳಿಗೆ ನೀರು-ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net